Advertisement

ಬಿಐಟಿಯಿಂದ”ಹಾಲಿಡೇ ಕಾರ್ನಿವಲ್‌’

06:25 AM Feb 18, 2018 | Team Udayavani |

ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ ಆಯೋಜಕ ಸಂಸ್ಥೆ ಭಾರತ್‌ ಇಂಟರ್‌ ನ್ಯಾಷನಲ್‌ ಟ್ರಾವೆಲ್ಸ್‌ (ಬಿಐಟಿ) ಫೆ.15 ರಿಂದ 18ರವರೆಗೆ ಮೆಗಾ “ಹಾಲಿಡೇ ಕಾರ್ನಿವಲ್‌’ ಏರ್ಪಡಿಸಿರುತ್ತದೆ. ಕರ್ನಾಟಕದ ನಂ.1 ಟ್ರಾವೆಲ್‌ ಕನ್ಸಲ್ಟೆಂಟ್‌ ಆಗುವತ್ತ ಮುನ್ನಡೆಯುತ್ತಿರುವ ಬಿಐಟಿ ಸಂಸ್ಥೆ ಕಳೆದ 27 ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದೆ.

Advertisement

ರಾಜ್ಯದಲ್ಲಿ ಯಾವುದೇ ಪ್ರಯಾಣ ಸಂಬಂಧಿ ಸೇವೆಗಾಗಿ ಮನೆಮಾತಾಗಿರುವ ಸಂಸ್ಥೆ 30ಕ್ಕೂ ಹೆಚ್ಚು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ಬ್ರಾÂಂಡ್‌ನೊಂದಿಗೆ ವ್ಯಾವಹಾರಿಕ ಸಂಬಂಧವನ್ನು ಇಟ್ಟುಕೊಂಡು ಎಲ್ಲ ರೀತಿ ಸೇವೆಗಳನ್ನು ಒದಗಿಸುತ್ತಿದೆ. ಪ್ರವಾಸಿಗರು ವಾರಾಂತ್ಯವನ್ನು ಸಂತೋಷವಾಗಿ ಕಳೆಯಬಹುದಾದ ಅಂಗ್‌ಸಾನ, ಬ್ಯಾನ್ಯಯನ್‌ ಟ್ರೀ ಹಾಗೂ ಕ್ಲಬ್‌ಮೆದ್‌ನಂತಹ ಐಷಾರಾಮಿ ರೆಸಾರ್ಟ್‌ಗಳು, ರಾಯಲ್‌ ಕೆರಿಬಿಯನ್‌ ಮತ್ತು ಪ್ರಿನ್ಸೆಸ್‌ ಕ್ರೂಸ್‌ಗಳಂತ ಪ್ರಮುಖ ಕ್ರೂಸ್‌ ಪಂಕ್ತಿಗಳ ಹಾಲಿಡೇಸ್‌ಗಳನ್ನು ಸಂಸ್ಥೆ ಒಳಗೊಂಡಿರುತ್ತದೆ.

ವಿದೇಶಿ ಪ್ರವಾಸಿ ಬ್ರಾÂಂಡ್‌ಗಳಾದ ಗ್ಲೋಬಸ್‌ ಮತ್ತು ಕಾಸ್ಮೋಸ್ ಸಂಸ್ಥೆಗಳೊಂದಿಗೂ ಸಹಭಾಗಿತ್ವವನ್ನು ಬಿಐಟಿ ಹೊಂದಿರುತ್ತದೆ. ಸ್ವೇಚ್ಛಾವಿಹಾರೋತ್ಸವ (ಕಾರ್ನಿವಲ್‌)ವನ್ನು ರೋಮಾಂಚಕಾರಿ ಮಾಡಲು ಬಿಐಟಿ, ಹಾಲಿಡೇ ಬುಕ್‌ ಮಾಡುವ ಪ್ರತಿ ಕುಟುಂಬಕ್ಕೆ ಒಂದು ಗಿಫ್ಟ್‌ ವೋಚರ್‌ ನೀಡಲು ಮುಂದಾಗಿದೆ. ಈ ಮೆಗಾ ಈವೆಂಟ್‌ನ ಒಂದೇ ವೇದಿಕೆಯಲ್ಲಿ ಪ್ರಮುಖ ಪ್ರಯಾಣ ಉತ್ಪನ್ನಗಳು ಹಾಗೂ ರಜಾ ಆಯ್ಕೆಗಳನ್ನು ತರುವ ಪ್ರಯತ್ನ ಇದಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ.7676022022 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next