Advertisement

ಹೋಳಿ ಬಣ್ಣದ ಬಲೂನು ಎಸೆತ : ಆಟೋ ಪಲ್ಟಿ; ಯುಪಿಯ ವಿಡಿಯೋ ವೈರಲ್

02:14 PM Mar 20, 2022 | Team Udayavani |

ಬಾಗ್‌ಪತ್‌ : ಹೋಳಿ ಸಂಭ್ರಮದ ವೇಳೆ ರಸ್ತೆಯ ಬದಿಯಲ್ಲಿ ನಿಂತ ವ್ಯಕ್ತಿಯೊಬ್ಬ ವೇಗವಾಗಿ ಚಲಿಸುತ್ತಿದ್ದ ಆಟೋವೊಂದರ ಮೇಲೆ ಬಣ್ಣದ ನೀರು ತುಂಬಿದ ಬಲೂನು ಎಸೆದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶವೂ ವ್ಯಕ್ತವಾಗಿದೆ.

Advertisement

ಬಲೂನ್ ಎಸೆದು ಆಟೋ ಪಲ್ಟಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ವಿಡಿಯೋ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಬಾಗ್‌ಪತ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು, ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಆಟೋ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅನುಜ್ ಮಿಶ್ರಾ ಹೇಳಿದ್ದಾರೆ.

ಬಣ್ಣದ ಬಲೂನ್ ಎಸೆದಿದ್ದರಿಂದ ಚಾಲಕನಿಗೆ ಆಟೋದ ಗಾಜು ನೋಡಲು ಸಾಧ್ಯವಾಗದೆ, ಅತಿವೇಗದ ಆಟೋ ಚಾಲಕ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

Advertisement

ಆಚರಿಸುವ ವಿಧಾನ ಯಾವುದು? ಯಾರು ಯಾವ ಉದ್ದೇಶಕ್ಕಾಗಿ ಎಲ್ಲಿಗೆ ಹೋಗುತ್ತಿದ್ದಾರೆ ಮತ್ತು ನೀವು ಯೋಚಿಸದೆ ಬಣ್ಣ, ನೀರು, ದನದ ಸಗಣಿ ಎರಚುವುದು ಸರಿಯಲ್ಲ. ಬಲೂನ್ ಗಳನ್ನು ನಿಷೇಧಿಸಬೇಕು, ಯಾರ ಮೇಲೂ ಬಲೂನ್ ಊದುವುದು ಸರಿಯಲ್ಲ ಎಂದು ಹಲವಾರು ಮಂದಿ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next