Advertisement

ದಳ, ಬಿಜೆಪಿ ಸೇರಿದವರಿಗೆ ಕಾಂಗ್ರೆಸ್‌ ಬಲದ ಅರಿವು

05:08 PM Oct 24, 2022 | Team Udayavani |

ಹೊಳೆನರಸೀಪುರ: ಕಾಂಗ್ರೆಸ್‌ ಪಕ್ಷ ತ್ಯಜಿಸಿ ಬಿಜೆಪಿ ಮತ್ತು ದಳಕ್ಕೆ ತೆರಳಿದ್ದ ಬಹುತೇಕ ಮುಖಂಡರು ಮತ್ತು ಕಾರ್ಯಕರ್ತರು ಪುನಃ ತನ್ನ ಮಾತೃ ಪಕ್ಷಕ್ಕೆ ಹಿಂದಿರುಗುವ ಸಾಧ್ಯತೆ ಅಧಿಕವಾಗಿದ್ದು ರಾಜಕೀಯ ಚಟುವಟಿಕೆ ಗರಿಗೆದರಿದೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಆರೇಳು ತಿಂಗಳಷ್ಟೇ ಬಾಕಿಯಿದ್ದು ಅಷ್ಟರೊಳಗೆ ರಾಜಕೀಯ ಪಕ್ಷಗಳಲ್ಲಿ ಮುಖಂಡರು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ವೇದಿಕೆ ಸಿದ್ಧ ಪಡಿಸಿಕೊಂಡಿದ್ದಾರೆ. ಕಳೆದ 2018 ರ ವಿಧಾನ ಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಪಕ್ಷದಲ್ಲಿದ್ದ ಅನೇಕ ಮುಖಂಡರು ಪಕ್ಷ ತ್ಯಜಿಸಿ ಬಿಜೆಪಿ ಮತ್ತು ದಳದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಬಗ್ಗೆ ರಾಜ್ಯ ಹೈಕಮಾಂಡ್‌ ಹೆಚ್ಚಿನ ಶಕ್ತಿ ತುಂಬುವ ಸಲುವಾಗಿ ಪಕ್ಷದ ಮುಖಂಡರು, ಕಾರ್ಯತಂತ್ರ ನಡೆಸಿ ಪಕ್ಷಕ್ಕೆ ಯುವ ನೇತಾರನನ್ನು ತರುವ ಸಲುವಾಗಿ ನಡೆದ ಪ್ರಯತ್ನಗಳು ಸಫಲವಾಗುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆ ಪಕ್ಷ ತ್ಯಜಿಸಿ ಅನ್ಯ ಪಕ್ಷಗಳಿಗೆ ತೆರಳಿದ್ದವರು ಸದ್ಯದಲ್ಲೆ ಮಾತೃ ಪಕ್ಷಕ್ಕೆ ಹಿಂತಿರುಗಲು ವೇದಿಕೆ ಸಿದ್ಧವಾಗುತ್ತಿದೆ. ಈ ಹಿಂದೆ ಪಕ್ಷ ತ್ಯಜಿಸಿದ್ದ ಬಹುತೇಕ ಮುಖಂ ಡರು ಯಾವುದೇ ಶರತ್ತು ಇಲ್ಲದೆ ಪಕ್ಷಕ್ಕೆ ಹಿಂತಿರುಗುತ್ತಿರುವುದು ಒಳ್ಳೆಯ ಸೂಚನೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ತಾಲೂಕಿನ ಕಾಂಗ್ರೆಸ್‌ ಮುಖಂಡರಾದ ಅನಪಮ ಮಹೇಶ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಂಜುನಾಥ್‌ ಮತ್ತು ಪಕ್ಷದ ಮುಖಂಡ ಎಂ.ಕೆ.ಶೇಷೇಗೌಡ ಅವರುಗಳನ್ನು ರಾಜ್ಯ ಕೆಪಿಸಿಸಿಗೆ ಸದಸ್ಯ ಸ್ಥಾನ ದೊರತ ಹಿನ್ನೆಲೆ ತಾಲೂಕಿನಲ್ಲಿ ಪಕ್ಷಕ್ಕೆ ನೂತನ ಅಧ್ಯಕ್ಷರ ನ್ನು ನೇಮಕ ಮಾಡಲು ಪಕ್ಷದ ಹೈಕಮಾಂಡ್‌ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಪಕ್ಷ ತ್ಯಜಿಸಿ ತೆರಳಿದ್ದ ಬಹುತೇಕ ಮುಖಂಡರು ಪಕ್ಷಕ್ಕೆ ಹಿಂತಿರು ಗುವ ಜೊತೆಗೆ ತಂತಮ್ಮ ಗ್ರಾಮಗಳಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ಪಣ ತೊಡುವುದಾಗಿ ಬೇಷರತ್‌ ಹೇಳಿಕೆ ನೀಡಿದ್ದು ಪಕ್ಷಕ್ಕೆ ಬಲ ಬಂದಿದೆ. ಪ್ರಸ್ತುತ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಪಕ್ಷಕ್ಕೆ ತೆರಳಿದ್ದ ಮುಖಂಡ ರು ಇದೀಗ ಬಿಜೆಪಿ ಪಕ್ಷಕ್ಕೆ ತಳಮಟ್ಟದಲ್ಲಿ ಹೇಳಿಕೊಳುವಂತ ಬಲ ಇಲ್ಲದೆ ಇರುವುದನ್ನು ಮನಗಂಡಿರುವ ಮುಖಂಡರು ಹಿಂದಿರುಗಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಎರಡು ಮೂರು ತಿಂಗಳಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಲ್ಲಿನ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಸಲುವಾಗಿ ಪಕ್ಷಗಳಲ್ಲಿ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಬಕಾ ಪಕ್ಷಿಗಳಂತೆ ಕಾದಿದ್ದಾರೆ. ಪ್ರಸ್ತುತ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಹೊಣೆಯನ್ನು ಮಾಜಿ ಸಂಸದ ಹಾಗೂ ಮಾಜಿ ಸಚಿವ ಜಿ.ಪುಟ್ಟ ಸ್ವಾಮಿಗೌಡ ಅವರ ಸೊಸೆ ಮತ್ತು ಮೊಮ್ಮಗ ಶ್ರೇಯಸ್‌ ಎಂ ಪಟೇಲ್‌ ಹೆಗಲಿಗೆ ಬೀಳುವುದು ಬಹುತೇಕ ಗ್ಯಾರಂಟಿ ಆಗಿದೆ.

ಇದೀಗ ಶ್ರೇಯಸ್‌ ಪಟೇಲ್‌ ಮತ್ತು ಅನುಪಮ ಅವರುಗಳು ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಮುಂದಾಗಿರುವುದು ಕ್ಷೇತ್ರದ ಮತದಾರರಲ್ಲಿ ಮತ್ತುಷ್ಟು ಹುರುಪು ಹೆಚ್ಚಿಸಿದೆ. ಮುಂದಿನ ನಾಲ್ಕಾರು ತಿಂಗಳಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿಲಿದೆ ಅನ್ನೋದು ಆಯಾಯಾ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next