Advertisement

ಹೊಳೆಹೊನ್ನೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಗಲಭೆ

10:22 PM Nov 11, 2022 | Vishnudas Patil |

ಹೊಳೆಹೊನ್ನೂರು: ಸಮೀಪದ ಹಾರೋಬೆನವಳ್ಳಿ ಗ್ರಾಮದಲ್ಲಿ ಶುಕ್ರವಾರ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಯುವಕರ ನಡುವೆ ಗಲಭೆ ನಡೆದಿದೆ.

Advertisement

ಇತ್ತೀಚೆಗೆ ಗ್ರಾಮದಲ್ಲಿ ನಿವೇಶನ ರಹಿತರಿಗೆ ಸರಕಾರದಿಂದ ಜಾಗ ನೀಡಲಾಗಿದೆ. ಆದರೆ ಈವರೆಗೂ ಯಾವುದೇ ದಾಖಲೆ ಆಗಿರುವುದಿಲ್ಲ. ಆದರೂ ಕೆಲವರು ಈಗಾಗಲೆ ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ. ಅಲ್ಲದೆ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಮನೆ ನಿರ್ಮಿಸುತ್ತಿರುವ ಜಾಗವು ನಮಗೆ ಸೇರಿದ್ದಾಗಿದೆ ನಿಮ್ಮ ಜಾಗ ಖಾತ್ರಿ ಮಾಡಿಕೊಂಡು ಮನೆ ಕೆಲಸ ಮಾಡಿ ಎಂದು ಇನ್ನೊಬ್ಬ ವ್ಯಕ್ತಿ ತಿಳಿಸಿದ್ದಾನೆ. ಆ ವೇಳೆ ಮಾತಿನ ಘರ್ಷಣೆ ಉಂಟಾಗಿ ಹೊಡೆದಾಟ ಆಗಿರುತ್ತದೆ.

ಬಳಿಕ ಮನೆ ಕೆಲಸ ಮಾಡುತ್ತಿರುವ ಕಡೆಯುವರು ಶಿವಮೊಗ್ಗದ ಹುಡುಗರಿಗೆ ಕರೆ ಮಾಡಿ ಸಂಜೆ ವೇಳೆಗೆ ಗ್ರಾಮಕ್ಕೆ ಕರೆಸಿಕೊಂಡು ಅನ್ಯ ಕೋಮಿನ ಕೆಲ ಯುವಕರಿಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯ ಗ್ರಾಮದಲ್ಲಿ ಹರಡಿ ಗ್ರಾಮಸ್ಥರೆಲ್ಲರೂ ಶಿವಮೊಗ್ಗದಿಂದ ಬಂದಿದ್ದ ಯುವರನ್ನು ಬೆನ್ನಟ್ಟಿದ್ದಾರೆ. ಆಗ ಹುಡುಗರು ಮನೆಯೊಂದಕ್ಕೆ ಹೊಕ್ಕಿರುತ್ತಾರೆ. ಅಷ್ಟರಲ್ಲಿ ಮನೆಯಲ್ಲಿದ್ದ ಮಹಿಳೆಯರು ಮನೆ ಒಳಗೆ ಯಾರೂ ನುಗ್ಗದಂತೆ ಅಡ್ಡಗಟ್ಟಿ ತಡೆದಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next