Advertisement

Kerala: ಯುವ ಮತದಾರರ ಸಂಖ್ಯೆ ಹೆಚ್ಚಳ; ದೇಶದಲ್ಲೇ ಪ್ರಥಮ

12:24 PM Mar 30, 2024 | Team Udayavani |

ಕುಂಬಳೆ: ಲೋಕಸಭೆ ಚುನಾವಣೆಗೆ ಕೇರಳದ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಅ. 27, 2023ರಿಂದ ಇಲ್ಲಿಯ ವರೆಗೆ 3,11,805 ಹೊಸ ಮತದಾರರನ್ನು ನೋಂದಾಯಿಸಲಾಗಿದೆ.

Advertisement

ಕರಡು ಮತದಾರರ ಪಟ್ಟಿಯಲ್ಲಿ 77,176 ಯುವ ಮತದಾರರಿದ್ದರು. ಎ. 22ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಇದು 2,88,533 ಆಗಿದೆ. ಮಾ. 25ರ ವರೆಗೆ 3,88,981 ಯುವ ಮತದಾರರಿದ್ದು, ಇವರು 18ರಿಂದ 19 ವರ್ಷದೊಳಗಿನವರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರು ಚೊಚ್ಚಲ ಮತದಾರರು.

ಯುವ ಮತದಾರರ ಸಂಖ್ಯೆಯಲ್ಲಿ ಈ ಹೆಚ್ಚಳ ಸರಾಸರಿ ಆಧಾರದಲ್ಲಿ ದೇಶದಲ್ಲಿಯೇ ಪ್ರಥಮ ಎಂದು ಮುಖ್ಯ ಚುನಾವಣಾ ಧಿಕಾರಿ ಸಂಜಯ್‌ ಕೌಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next