Advertisement

Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

11:32 PM Apr 14, 2024 | Team Udayavani |

ಕಲಬುರಗಿ: ನಗರದ ಕೇಂದ್ರೀಯ ಬಸ್ ಎದುರಿನ ವಿದ್ಯಾ ನಗರದಲ್ಲಿ ಭಾನುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Advertisement

ಆಕಾಶ್ (22) ಎಂಬಾತನೇ ಹತ್ಯೆಗೀಡಾದ ಯುವಕ. ಕಲಬುರಗಿಯ ಅಶೋಕ್ ನಗರ ಬಡಾವಣೆ ನಿವಾಸಿ ಆಕಾಶ್, ಆಂಜನೇಯ ಎನ್ನುವವರ ಪುತ್ರ ಎಂದು ತಿಳಿದು ಬಂದಿದೆ.

ಅಪರಿಚಿತ ದುಷ್ಕರ್ಮಿಗಳು ದಾಳಿ‌ ನಡೆಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next