Advertisement

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

09:54 AM May 21, 2024 | Team Udayavani |

ಬೆಂಗಳೂರು: ಮದುವೆ ಸಮಾರಂಭದ ಆರತಕ್ಷತೆ ಕಾರ್ಯಕ್ರಮದಲ್ಲಿ “ಲಿಕ್ವಿಡ್‌ ನೈಟ್ರೋಜನ್‌’ನಿಂದ ಕೂಡಿದ ಪಾನ್‌ ಸೇವಿಸಿ, ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ವರದಿಯಾಗಿದೆ.

Advertisement

ಬೆಂಗಳೂರಿನ 12 ವರ್ಷದ ಬಾಲಕಿಯೊಬ್ಬರು ಇತ್ತೀಚೆಗೆ ಸಂಬಂಧಿಕರ ಮದುವೆ ಸಮಾರಂಭದ ಅರತಕ್ಷತೆಗೆ ತೆರಳಿ, ಅಲ್ಲಿ ಊಟದ ಬಳಿಕ ಲಿಕ್ವಿಡ್‌ ನೈಟ್ರೋಜನ್‌ನಿಂದ ಕೂಡಿದ ಪಾನ್‌ ಸೇವಿಸಿದ್ದಾರೆ.

ಈ ವೇಳೆ ಅನಾರೋಗ್ಯಕ್ಕೆ ಒಳಗಾದ ಬಾಲಕಿಯನ್ನು ಎಚ್‌ಎಸ್‌ಆರ್‌ ಲೇಔಟ್‌ನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಾ. ವಿಜಯ ಎಚ್‌.ಎಸ್‌. ಅವರು ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಲಿಕ್ವಿಡ್‌ ನೈಟ್ರೋಜನ್‌ನಿಂದ ಕೂಡಿದ ಪಾನ್‌ ಸೇವನೆಯಿಂದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿರುವುದು ದೃಢಪಡಿಸಿದ್ದಾರೆ.

ಈ ವೇಳೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ರಂಧ್ರವನ್ನು ಮುಚ್ಚಿದ್ದಾರೆ. ಬಾಲಕಿ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ದೃಢಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next