Advertisement
ಕ್ರೀಡಾಕೂಟದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಗಳ ಗ್ರಾ.ಪಂ., ತಾ.ಪಂ., ಜಿ.ಪಂ., ಮಹಾನಗರಪಾಲಿಕೆ, ನಗರ ಸಭೆ, ಪ.ಪಂ. ಗಳ ಒಟ್ಟು 413 ಸ್ಥಳೀಯ ಸಂಸ್ಥೆಗಳ ಸುಮಾರು 9 ಸಾವಿರ ಜನಪ್ರತಿನಿಧಿಗಳು ಓಡಿ, ಆಡಿ ಖುಷಿಪಟ್ಟರು. ಜಿಲ್ಲೆಯ 75 ಮಂದಿ ದೈ.ಶಿ.ಶಿಕ್ಷಕರು ಕ್ರೀಡಾಚಟುವಟಿಕೆಯಲ್ಲಿ ಹಾಗೂ 10ಕ್ಕೂ ಮಂದಿ ಸಾಂಸ್ಕೃತಿಕ ಸ್ಪರ್ಧೆಯ ತೀರ್ಮಾನಕರಾಗಿ ಕಾರ್ಯ ನಿರ್ವಹಿಸಿದರು.
ಉಡುಪಿ ಹಾಗೂ ದ.ಕ. ಜಿಲ್ಲೆಯ 413 ಸ್ಥಳೀಯಾಡಳಿ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬಂದಿಯ ಪಥಸಂಚಲನದಲ್ಲಿ ಭಾಗವಹಿಸಿದರು. ಸ್ವತ್ಛ ಭಾರತ್, ಬಯಲು ಶೌಚ ಮುಕ್ತ ಗ್ರಾ.ಪಂ., ಶಿಕ್ಷಣ, ತುಳುನಾಡಿನ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ಕೋಲಾ, ಚಂದ್ರಯಾನ-2, ದೇಶದ ವಿವಿಧ ಪ್ರದೇಶಗಳ ಪ್ರಾದೇಶಿಕ ಉಡುಪು, ಕೊರಗರ ಡೋಲು ವಾದನ, ಮೀನುಗಾರಿಕೆ, ಕೊರಗಜ್ಜ, ಯಕ್ಷಗಾನ, ಕಂಬಳದ ಕೋಣ, ಸೈನಿಕರ ವೇಷಭೂಷಣಗಳನ್ನು ಮುಂತಾದ ಉಡುಪುಗಳನ್ನು ತೊಟ್ಟ ಸದಸ್ಯರು ಪಥಸಂಚಲನದಲ್ಲಿ ಗಮನಸೆಳೆದರು.
Related Articles
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸೂಪರ್ ಮಿನಿಟ್, ಗಾಯನ, ಛದ್ಮವೇಷ, ಕ್ರೀಡಾ ಸ್ಪರ್ಧೆಯಲ್ಲಿ 100 ಮೀರ್ಟ ಓಟ, ಗುಂಡು ಎಸೆತ, ರಿಂಗ್ ಇನ್ ದ ವಿಕೆಟ್, ಮಡಕೆ ಒಡೆಯವುದು, ಗುಂಪು ಸ್ಪರ್ಧೆಯಲ್ಲಿ ಹಗ್ಗಜಗ್ಗಾಟ, ತ್ರೋಬಾಲ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಸೀನಿಯರ್, ಸಬ್ ಸೀನಿಯರ್ ವಿಭಾಗದಲ್ಲಿ ಜರಗಿತು. ಸ್ಪರ್ಧಾಗಳು ನೀಡಲಾದ ಸಮವಸ್ತ್ರ ಹಾಗೂ ಟೋಪಿಯನ್ನು ಧರಿಸಿಕೊಂಡು ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು. ನಾವು ಬೇರೆ ಬೇರೆ ಪಕ್ಷದಿಂದ ಚುನಾಯಿತರಾದವರು ಎಂಬುದನ್ನು ಮರೆತು ಒಗ್ಗಟ್ಟಿನ ಪ್ರದರ್ಶನ ತೋರಿರುವುದು ಈ ಕಾರ್ಯಕ್ರಮದ ವಿಶೇಷತೆಯನ್ನು ತೋರಿಸಿದೆ.
Advertisement