Advertisement

ಹಾಕಿ ವಿಶ್ವಕಪ್‌: ಪಾಕ್‌ ಆಡುವುದು ಖಚಿತ

06:05 AM Nov 11, 2018 | Team Udayavani |

ಹೊಸದಿಲ್ಲಿ: ಹಣದ ಸಮಸ್ಯೆಯಿಂದಾಗಿ ಪಾಕಿಸ್ಥಾನ ಹಾಕಿ ತಂಡ ಭುವನೇಶ್ವರದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂಬ ಸುದ್ದಿಯನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್ಐಎಚ್‌) ಅಧ್ಯಕ್ಷ ನರೀಂದರ್‌ ಬಾತ್ರ ಹಾಗೂ ಪಾಕಿಸ್ಥಾನ ಹಾಕಿ ಫೆಡರೇಶನ್‌(ಪಿಎಚ್‌ಎಫ್) ಕಾರ್ಯದರ್ಶಿ ಶಹಬಾಜ್‌ ಅಹ್ಮದ್‌ ಅಲ್ಲ ಗೆಳೆ ದಿದ್ದು, ಪಾಕಿಸ್ಥಾನ ಈ ಕೂಟದಲ್ಲಿ ಖಂಡಿತವಾಗಿಯೂ ಭಾಗವ ಹಿಸುತ್ತದೆ ಎಂದು ತಿಳಿಸಿದ್ದಾರೆ.

Advertisement

“ಈ ಕಲ್ಪಿತ ಸುದ್ದಿಯ ಮೂಲ ಯಾವುದು ಎಂಬ ಬಗ್ಗೆ ನನಗೆ ತಿಳಿದಿಲ್ಲ. ನಾನು ಎಫ್ಐಎಚ್‌ ಅಧ್ಯಕ್ಷನಾಗಿದ್ದರೂ ಇಂತಹ ವಿದ್ಯಮಾನವೊಂದು ಸಂಭವಿಸಿದೆ ಎಂಬುದು ಇಲ್ಲಿಯವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಅಲ್ಲದೆ ಪಿಎಚ್ಎಫ್ ಭಾರತಕ್ಕೆ ಪ್ರವಾಸ ಬೆಳೆಸಲು ಆಗುವುದಿಲ್ಲ ಎಂದು ನನ್ನಲ್ಲಿ ಹೇಳಿಕೊಂಡಿ ಲ್ಲ. ನನಗೆ ತಿಳಿದಿರುವ ಪ್ರಕಾರ ಪಾಕಿಸ್ಥಾನ ತಂಡ ಹಾಕಿ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುತ್ತದೆ’ ಎಂದು ನರೀಂದರ್‌ ಬಾತ್ರ ಸ್ಪಷ್ಟ ಪಡಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ
“ಆರ್ಥಿಕ ವಿಚಾರವಾಗಿ ಪಿಎಚ್‌ಎಫ್ನಲ್ಲಿ ಸಮಸ್ಯೆ ಇರುವ ವಿಚಾರವನ್ನು ನಾನು ಅಲ್ಲ ಗೆಳೆಯುವುದಿಲ್ಲ. ಆದರೆ ಹಣಕಾಸಿನ ತೊಂದರೆಯಿಂದ ವಿಶ್ವಕಪ್‌ನಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂಬ ಸುದ್ದಿ ಸುಳ್ಳು. 4 ಬಾರಿಯ ವಿಶ್ವ ಕಪ್‌ ಚಾಂಪಿಯನ್‌ ಆಗಿರುವ ಪಾಕಿಸ್ಥಾನ ಪ್ರಮುಖ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ವಿಚಾರವನ್ನು ನೀವು ನಂಬುತ್ತೀರಾ? ನಾನು ಮಾಧ್ಯ ಮಗಳಿಗೆ ಇಂತಂಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಪಾಕಿಸ್ಥಾನ ತಂಡ ಭಾರತಕ್ಕೆ ಬರುತ್ತದೆ ಎಂಬುದನ್ನು ನಾನು ಖಚಿತವಾಗಿ ಹೇಳುತ್ತೇನೆ’ ಎಂದು ಶಹಬಾಜ್‌ ಅಹ್ಮದ್‌ ಹೇಳಿದ್ದಾರೆ.

“ಭಾರತದ ಉನ್ನತ ಪ್ರಾಧಿಕಾರಕ್ಕೆ ವೀಸಾ ಅರ್ಜಿಗಳನ್ನು ಒಂದು ತಿಂಗಳ ಹಿಂದೆಯೇ ಕಳುಹಿಸಲಾಗಿದೆ. ವೀಸಾ ಸಮಸ್ಯೆ ಏನಿಲ್ಲ. ಎಲ್ಲ ನಿಯಮಗಳನ್ನು ನಾವು ಪಾಲಿಸಿದ್ದು, ಒಂದು ವಾರದೊಳಗಾಗಿ ವೀಸಾ ಪಡೆಯುತ್ತೇವೆ ಎಂಬ ನಂಬಿಕೆ ಇದೆ’ ಎಂದು ಅಹ್ಮದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next