Advertisement

ಹಾಕಿ ವಿಶ್ವಕಪ್‌: ಪಾಕ್‌ ತಂಡಕ್ಕೆ ಭಾರತ ವೀಸಾ?

06:25 AM Nov 06, 2018 | |

ನವದೆಹಲಿ: ನ.28ರಿಂದ ಒಡಿಶಾದ ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್‌ ಶುರುವಾಗಲಿದೆ. ಇಷ್ಟಾದರೂ ಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಪಾಕಿಸ್ತಾನ ತಂಡಕ್ಕೆ ವೀಸಾ ನೀಡುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. 

Advertisement

ಬಹುರಾಷ್ಟ್ರಗಳ ಕೂಟವಾಗಿರುವುದರಿಂದ ಪಾಕಿಸ್ತಾನಕ್ಕೆ ವೀಸಾ ಕೊಡಬಹುದು ಎಂಬ ಚಿಂತನೆ ಕೇಂದ್ರಸರ್ಕಾರದಲ್ಲಿದೆ, ಈ ಬಗ್ಗೆ ಇನ್ನೂ ಲೆಕ್ಕಾಚಾರ ನಡೆಯುತ್ತಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಎಫ್ಐಎಚ್‌ ಕೂಡ ಪಾಕ್‌ಗೆ ವೀಸಾ ನೀಡಿ ಎಂದು ಭಾರತ ಸರ್ಕಾರಕ್ಕೆ ಮನವಿ ನೀಡಿದೆ. 

ನ.28ರಿಂದ ಡಿ.16ರವರೆಗೆ 19 ದಿನಗಳ ಕೂಟ ನಡೆಯಲಿದೆ. ಒಟ್ಟು ನಾಲ್ಕು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದ್ದು, ಭಾರತ ಸಿ ಗುಂಪಿನಲ್ಲಿದೆ. ಸದ್ಯ ಎರಡೂ ರಾಷ್ಟ್ರಗಳ ನಡುವೆ ಗಡಿಯಲ್ಲಿ ತೀವ್ರ ಚಕಮಕಿ ಇರುವುದರಿಂದ ಪಾಕ್‌ ಜೊತೆಗಿನ ದ್ವಿಪಕ್ಷೀಯ ಕ್ರೀಡಾ ಸಂಬಂಧವನ್ನು ಭಾರತ ರದ್ದುಗೊಳಿಸಿದೆ. ಇದರ ಪರಿಣಾಮ ಪಾಕ್‌ನೊಂದಿಗೆ ಭಾರತ ದ್ವಿಪಕ್ಷೀಯ ಕ್ರಿಕೆಟ್‌ ಕೂಡ ನಿಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next