ಭುವನೇಶ್ವರ: ವಿಶ್ವಕಪ್ ಹಾಕಿ ಕೂಟದ ಆತಿಥೇಯ ರಾಷ್ಟ್ರವಾಗಿದ್ದೂ ಕನಿಷ್ಠ ಕ್ವಾರ್ಟರ್ ಫೈನಲ್ ಕೂಡ ತಲುಪಲಾಗದ ದುಃಸ್ಥಿತಿ ಭಾರತದ್ದಾಗಿ ರುವುದು ಹಾಕಿ ಅಭಿಮಾನಿಗಳನ್ನು ಅತ್ಯಂತ ಘಾಸಿಗೊಳಿಸಿದ ಸಂಗತಿ.
ಇದೀಗ ಹರ್ಮನ್‌ಪ್ರೀತ್ ಪಡೆಯ ಮುಂದಿರುವುದು 9ರಿಂದ 16ನೇ ಸ್ಥಾನದ ಸ್ಪರ್ಧೆ. ಇದಕ್ಕಾಗಿ ಗುರುವಾರ ಜಪಾನ್ ವಿರುದ್ಧ ಭಾರತ ಸೆಣಸಲಿದೆ.
ಇಲ್ಲಿ ಗೆದ್ದರೆ ಭಾರತಕ್ಕೊಂದಿಷ್ಟು ಮರ್ಯಾದೆ. ಅಕಸ್ಮಾತ್ ಸೋತರೆ ಅದು ತನ್ನ ವಿಶ್ವಕಪ್ ಚರಿತ್ರೆಯಲ್ಲೇ ಅತ್ಯಂಕ ಕೆಳಗಿನ ಸ್ಥಾನಕ್ಕೆ ಕುಸಿಯುವ ಸಂಕಟಕ್ಕೆ ಸಿಲುಕಲಿದೆ. ಆಗ 13ರಿಂದ 16ನೇ ಸ್ಥಾನಕ್ಕಾಗಿ ಮತ್ತೊಂದು ಪಂದ್ಯವನ್ನು ಆಡಬೇಕಾಗುತ್ತದೆ.
ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ನಿಕೃಷ್ಟ ಪ್ರದರ್ಶನ ಕಂಡು ಬಂದದ್ದು 1986ರ ಲಂಡನ್ ಕೂಟದಲ್ಲಿ. ಅಂದು ಭಾರತ 12ನೇ ಸ್ಥಾನಕ್ಕೆ ಕುಸಿದಿತ್ತು. ಅಂದಿನ ಕೂಟದಲ್ಲಿ ಹನ್ನೆರಡೇ ತಂಡ ಗಳು ಪಾಲ್ಗೊಂಡಿದ್ದರಿಂದ ಇದು ಕಟ್ಟ ಕಡೆಯ ಸ್ಥಾನವೂ ಆಗಿತ್ತು. ಆದರೆ ಈ ಬಾರಿ 16 ತಂಡಗಳು ಸೆಣಸುತ್ತಿವೆ.
ಹೀಗಾಗಿ 13ರಿಂದ 16ನೇ ಸ್ಥಾನಕ್ಕಾಗಿ ಭಾರತ ಸ್ಪರ್ಧಿಸಲಿದೆ. ಹೀಗಾಗಿ ತವರಲ್ಲೇ ಭಾರತ ತಂಡ ವಿಶ್ವಕಪ್ ಚರಿತ್ರೆಯಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿಯುವುದನ್ನು ನೋಡಬೇಕಿದೆ!