Advertisement

Australia ವಿರುದ್ಧದ ಹಾಕಿ ಸರಣಿ: ಭಾರತಕ್ಕೆ 0-5 ಸೋಲಿನ ಆಘಾತ

11:55 PM Apr 13, 2024 | Team Udayavani |

ಪರ್ತ್‌: ಭಾರತೀಯ ಹಾಕಿ ತಂಡವು ಆಸ್ಟ್ರೇಲಿಯ ಪ್ರವಾಸದ ವೇಳೆ ನಡೆದ ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ 0-5 ಅಂತರದಿಂದ ಸೋತು ಆಘಾತಕ್ಕೆ ಒಳಗಾಗಿದೆ. ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿ ತೀವ್ರವಾಗಿ ಹೋರಾಡಿದರೂ ಅಂತಿಮವಾಗಿ ಭಾರತ 2-3 ಅಂತರದಿಂದ ಸೋಲನ್ನು ಕಂಡಿತು.

Advertisement

ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನ ಸಿದ್ಧತೆ ನಡೆಸಲು ಈ ಹೋರಾಟ ಭಾರತೀಯ ತಂಡದ ಪಾಲಿಗೆ ಅತೀ ಮುಖ್ಯವಾಗಿತ್ತು. ಮೊದಲ ನಾಲ್ಕು ಪಂದ್ಯಗಳಲ್ಲಿ ಅನುಕ್ರಮವಾಗಿ 1-5, 2-4, 1-2 ಮತ್ತು 1-3 ಗೋಲುಗಳ ಅಂತರದಿಂದ ಸೋತಿದ್ದ ಭಾರತ ಈ ಪಂದ್ಯದಲ್ಲಿ ಪ್ರಬಲ ಹೋರಾಟ ಸಂಘಟಿಸಿತ್ತು. ಪಂದ್ಯ ಆರಂಭವಾದ ನಾಲ್ಕನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿ,ಗ್‌ ಗೋಲನ್ನು ಹೊಡೆದು ಮುನ್ನಡೆ ಸಾಧಿಸಿದ್ದರು.

ಭಾರತ ಉತ್ತಮ ಆರಂಭ ಪಡೆದರೂ ಆಸ್ಟ್ರೇಲಿಯವೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. 20ನೇ ನಿಮಿಷದಲ್ಲಿ ಜೆರೆಮಿ ಹೇವಾರ್ಡ್‌ ಮತ್ತು ಕಿ ವಿಲ್ಲೋಟ್‌ (38ನೇ) ಮತ್ತು ಟಿಮ್‌ ಬ್ರ್ಯಾಂಡ್‌ (39ನೇ) ಎರಡು ನಿಮಿಷಗಳ ಅಂತರದಲ್ಲಿ ಗೋಲನ್ನು ಹೊಡೆದು ಆತಿಥೇಯ ತಂಡಕ್ಕೆ 3-1 ಮುನ್ನಡೆ ಒದಗಿಸಿದರು. ಇದರಿಂದ ಭಾರತ ತೀವ್ರ ಆಘಾತ ಅನುಭವಿಸಿದರೂ 53ನೇ ನಿಮಿಷದಲ್ಲಿ ಬಾಬಿ ಸಿಂಗ್‌ ಧಾಮಿ ಇನ್ನೊಂದು ಗೋಲು ಹೊಡೆದು ಸೋಲಿನ ಅಂತರವನ್ನು 2-3ಕ್ಕೆ ಇಳಿಸಲು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next