Advertisement
1925ರ ಡಿ. 29ರಂದು ಲಾಹೋರ್‌ನಲ್ಲಿ ಜನಿಸಿದ ಕೇಶವ್ ದತ್, ಹಾಫ್ಬ್ಯಾಕ್ ಆಟಗಾರನಾಗಿ ಜನಪ್ರಿಯರಾಗಿದ್ದರು. 1948ರ ಲಂಡನ್ ಒಲಿಂಪಿಕ್ಸ್ ಹಾಗೂ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ವಿಜೇತ ಭಾರತ ಭಾರತ ತಂಡದ ಸದಸ್ಯರಾಗಿದ್ದರು. ಲಂಡನ್‌ನಲ್ಲಿ ಭಾರತ ಆತಿಥೇಯ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಬಗ್ಗುಬಡಿದಿತ್ತು. ಸ್ವಾತಂತ್ರ್ಯ ಲಭಿಸಿದ ಬಳಿಕ ಭಾರತಕ್ಕೆ ಒಲಿದ ಮೊದಲ ಒಲಿಂಪಿಕ್ಸ್ ಹಾಕಿ ಚಿನ್ನ ಇದಾಗಿತ್ತು. ಬಳಿಕ ಹೆಲ್ಸಿಂಕಿಯಲ್ಲಿ ನೆದರ್ಲೆಂಡ್ಸ್‌ಗೆ 6-1 ಅಂತರದ ಸೋಲುಣಿಸಿ ಸತತ 5ನೇ ಚಿನ್ನ ಜಯಿಸಿತ್ತು.
Related Articles
1948ರ ಒಲಿಂಪಿಕ್ಸ್‌ಗೂ ಮುನ್ನ ಹಾಕಿ ದಂತಕತೆ ಮೇಜರ್ ಧ್ಯಾನ್‌ಚಂದ್ ನಾಯಕತ್ವದಲ್ಲಿ ಪೂರ್ವ ಆಫ್ರಿಕಾ ಪ್ರವಾಸಗೈದ ಭಾರತ ತಂಡದಲ್ಲೂ ಕೇಶವ್ ದತ್ ಇದ್ದರು. 50ರ ದಶಕದಲ್ಲಿ, ಎರಡು ಅವಧಿಗಳಲ್ಲಿ ಅವರು ಮೋಹನ್ ಬಗಾನ್ ಹಾಕಿ ತಂಡದ ನಾಯಕತ್ವವನ್ನೂ ವಹಿಸಿದ್ದರು. ಈ ಕ್ಲಬ್‌ನೊಂದಿಗೆ ಒಂದು ದಶಕದ ಬಾಂಧವ್ಯ ಅವರದಾಗಿತ್ತು. 2019 ರಲ್ಲಿ “ಮೋಹನ್ ಬಗಾನ್ ರತ್ನ’ ಗೌರವಕ್ಕೆ ಭಾಜನರಾಗಿದ್ದರು. ಫುಟ್ಬಾಲಿಗರನ್ನು ಹೊರತುಪಡಿಸಿ ಈ ಗೌರವಕ್ಕೆ ಪಾತ್ರರಾದ ಮೊದಲ ಆಟಗಾರನೆಂಬುದು ದತ್ ಹೆಗ್ಗಳಿಕೆ.
Advertisement
ದತ್ ನಿಧನಕ್ಕೆ ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೇಂದೊ ನಿಂಗೋಂಬಮ್, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.