Advertisement

ಹಾಕಿ ರಾಷ್ಟ್ರೀಯ ಕ್ರೀಡೆಯೆನ್ನುವುದು ಘೋಷಣೆ ಮಾತ್ರ, ನಿಜವಲ್ಲ!

06:50 AM Jun 21, 2018 | Team Udayavani |

ನವದೆಹಲಿ: ಒಂದು ಕಾಲದಲ್ಲಿ ಕ್ರಿಕೆಟ್‌ನಷ್ಟೇ ಭಾರತದಲ್ಲಿ ಹಾಕಿ ಜನಪ್ರಿಯವಾಗಿತ್ತು. ಮನೆಮನೆಗಳಲ್ಲಿ ಹಾಕಿಯದ್ದೇ ಚರ್ಚೆ ಆಗುತ್ತಿತ್ತು. ಹಾಕಿಯನ್ನು ರಾಷ್ಟ್ರೀಯ ಕ್ರೀಡೆಯೆಂದು ಭಾರತದಲ್ಲಿ ಹೇಳಲಾಗುತ್ತಿತ್ತು. ಇದೀಗ ಬಯಲಾದ ಸತ್ಯವೆಂದರೆ ಹಾಕಿ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯೇ ಅಲ್ಲ. ಅದು ಜನಪ್ರಿಯ ಹೇಳಿಕೆ ಮಾತ್ರ. ಕೇಂದ್ರ ಸರ್ಕಾರ ಇನ್ನೂ ಹಾಕಿಯನ್ನು ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಿಲ್ಲ!

Advertisement

ಈ ವಿಷಯವನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಬಹಿರಂಗ ಮಾಡಿದ್ದಾರೆ. ಈ ವರ್ಷಾಂತ್ಯದಲ್ಲಿ ಒಡಿಶಾದಲ್ಲಿ ಹಾಕಿ ವಿಶ್ವಕಪ್‌ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ತನಗೆ ಈ ವಿಷಯ ಗೊತ್ತಾಗಿದೆ ಎಂದು ಪಟ್ನಾಯಕ್‌ ಹೇಳಿಕೊಂಡಿದ್ದಾರೆ. ಅದನ್ನು ಪ್ರಧಾನಿ ಮೋದಿಯವರ ಗಮನಕ್ಕೂ ತಂದಿದ್ದಾರೆ.

“ನಿಮಗೆ ಗೊತ್ತಿರುವಂತೆ ಈ ನವೆಂಬರ್‌ನಲ್ಲಿ ಒಡಿಶಾದಲ್ಲಿ ಹಾಕಿ ವಿಶ್ವಕಪ್‌ ನಡೆಯಲಿದೆ. ಇದರ ಸಿದ§ತೆಗಾಗಿ ಪರಿಶೀಲನೆ ಮಾಡುತ್ತಿದ್ದಾಗ ನನಗೆ ಗೊತ್ತಾದ ಒಂದು ಸಂಗತಿಯಿಂದ ಆಘಾತಕ್ಕೊಳಗಾಗಿದ್ದೇನೆ. ಹಾಕಿಯನ್ನು ಜನಪ್ರಿಯವಾಗಿ ರಾಷ್ಟ್ರೀಯ ಕ್ರೀಡೆ ಎನ್ನುತ್ತಿದ್ದರೂ ಅದನ್ನು ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಿಲ್ಲ. ದಯವಿಟ್ಟು ಅದನ್ನು ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಬೇಕು’ ಎಂದು ಪಟ್ನಾಯಕ್‌ ಅವರು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಭಾರತ ಹಾಕಿಯಲ್ಲಿ 8 ಒಲಿಂಪಿಕ್ಸ್‌ ಚಿನ್ನ ಗೆದ್ದಿದ್ದರೆ, ಒಮ್ಮೆ ವಿಶ್ವಚಾಂಪಿಯನ್‌ ಆಗಿದೆ. ಇತ್ತೀಚೆಗೆ ಮತ್ತೆ ಭಾರತ ಹಾಕಿಯಲ್ಲಿ ಬಲಿಷ್ಠ ತಂಡವಾಗಿ ಬದಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next