Advertisement
ಮಂಗಳವಾರ ನಡೆದ ಸೆಮಿಫೈನಲ್ನಲ್ಲಿ ಭಾರತ 3-1 ಅಂತರದಿಂದ ಮಲೇಷ್ಯಾವನ್ನು ಮಣಿಸಿತು. ಮೊದಲ ಉಪಾಂತ್ಯದಲ್ಲಿ ಪಾಕಿಸ್ಥಾನ 4-2 ಗೋಲುಗಳಿಂದಜಪಾನ್ಗೆ ಆಘಾತವಿಕ್ಕಿತು. ಭಾರತ ತೀವ್ರ ಎಚ್ಚರಿಕೆಯ ಹಾಗೂ ಅಷ್ಟೇ ಆಕ್ರಮಣಕಾರಿ ಆಟದ ಮೂಲಕ ಮಲೇಷ್ಯಾವನ್ನು ತಡೆದು ನಿಲ್ಲಿಸಿತು. ಮೊದಲ ಗೋಲನ್ನು 10ನೇ ನಿಮಿಷದಲ್ಲಿ ದಿಲ್ರಾಜ್ ಸಿಂಗ್ ಬಾರಿಸಿದರು. ಬಳಿಕ 45ನೇ ನಿಮಿಷದಲ್ಲಿ ರೋಹಿತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಮುನ್ನಡೆಯನ್ನು ವಿಸ್ತರಿಸಿದರು.