Advertisement

Bronze ಗೆದ್ದ ಬಳಿಕ ಭಾರತೀಯರ ಕ್ಷಮೆ ಕೇಳಿದ ಹಾಕಿ ನಾಯಕ ಹರ್ಮನ್ ಪ್ರೀತ್!

08:18 PM Aug 08, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಗೆದ್ದ ಬಳಿಕ ಅತ್ಯಮೋಘ ಆಟವಾಡಿ ತಂಡವನ್ನು ಮುನ್ನೆಡೆಸಿದ್ದ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಭಾರತೀಯರ ಕ್ಷಮೆ ಯಾಚಿಸಿದ್ದಾರೆ.

Advertisement

ಕಂಚಿನ ಪದಕದ ಪಂದ್ಯದಲ್ಲಿ ಎರಡು ಗೋಲು ಸೇರಿದಂತೆ 11 ಗೋಲುಗಳೊಂದಿಗೆ ಅಮೋಘ ಆಟವಾಡಿ ನಾಯಕನ ಜವಾಬ್ದಾರಿ ಮೆರೆದ ಹರ್ಮನ್‌ಪ್ರೀತ್ ಸಿಂಗ್ ಗೆಲುವಿನ ಸಂಭ್ರಮದಲ್ಲಿ ಮಾತನಾಡಿದರು. ‘ಹಾಕಿ ತಂಡವು ದೇಶಕ್ಕಾಗಿ ಚಿನ್ನ ಗೆಲ್ಲಲು ಬಯಸಿತ್ತು. ಎಲ್ಲಾ ರೀತಿಯಲ್ಲೂ ಸಮೀಪಕ್ಕೆ ಬಂದಿದ್ದೆವು ಆದರೆ ಚಿನ್ನ ಗೆಲ್ಲುವುದು ನಮ್ಮ ಅದೃಷ್ಟದಲ್ಲಿರಲಿಲ್ಲ’ ಎಂದು ನೋವು ಹೊರ ಹಾಕಿದರು.’ಈ ಬಾರಿ ಚಿನ್ನ ಗೆಲ್ಲದಿದ್ದಕ್ಕೆ ದೇಶದ ಕ್ಷಮೆ ಯಾಚಿಸುತ್ತೇನೆ. ಹಾಕಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಭಾರತೀಯ ಹಾಕಿ ಏರುಗತಿಯಲ್ಲಿ ಸಾಗುತ್ತಿದೆ’ ಎಂದರು.

ಪ್ರಧಾನಿ ಮೋದಿ ಅಭಿನಂದನೆ
ಕುಸ್ತಿ ಪಟು ವಿನೇಶ್ ಫೋಗಾಟ್ ಅವರು ಅನಿರೀಕ್ಷಿತ ಎಂಬಂತೆ ಚಿನ್ನದ ಪದಕದ ಪಂದ್ಯದಿಂದ ಅನರ್ಹವಾದ ನೋವಿನಲ್ಲೇ ಭಾರತದ ಕ್ರೀಡಾ ಲೋಕ ಇರುವ ವೇಳೆ ಕಂಚಿನ ಪದಕ ಗೆದ್ದ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರು ಶುಭ ಹಾರೈಸಿದ್ದಾರೆ.

“ಮುಂದಿನ ತಲೆಮಾರುಗಳು ಪಾಲಿಸಬೇಕಾದ ಸಾಧನೆ! ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡವು ಕಂಚಿನ ಪದಕವನ್ನು ತಂದಿದೆ! ಇದು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಇದು ಒಲಿಂಪಿಕ್ಸ್‌ನಲ್ಲಿ ಅವರ ಸತತ ಎರಡನೇ ಪದಕವಾಗಿದೆ. ಅವರ ಯಶಸ್ಸು ವಿಜಯೋತ್ಸವವಾಗಿದೆ. ಕೌಶಲ್ಯ, ಪರಿಶ್ರಮ ಮತ್ತು ತಂಡದ ಸ್ಪೂರ್ತಿಯನ್ನು ಆಟಗಾರರು ತೋರಿದ್ದಾರೆ. ಪ್ರತಿಯೊಬ್ಬ ಭಾರತೀಯರು ಹಾಕಿಯೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಈ ಸಾಧನೆಯು ನಮ್ಮ ದೇಶದ ಯುವಕರಲ್ಲಿ ಕ್ರೀಡೆಯ ಕುರಿತು ಇನ್ನಷ್ಟು ಜನಪ್ರಿಯತೆಯನ್ನು ನೀಡುತ್ತದೆ” ಎಂದು ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಶ್ರೀಜೇಶ್ ಮನೆಯಲ್ಲಿ ಸಂಭ್ರಮಾಚರಣೆ

ತಂಡದ ಸಾಧನೆಯಲ್ಲಿ ಗಣನೀಯ ಕೊಡುಗೆ ನೀಡಿದ, ವಿದಾಯ ಪಂದ್ಯ ಆಡಿದ ಗೋಲ್ ಕೀಪರ್ ಪಿ. ಆರ್ ಶ್ರೀಜೇಶ್ ಅವರ ಕೇರಳದ ಎರ್ನಾಕುಲಂನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕುಟುಂಬದವರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಶ್ರೀಜೇಶ್ ಅವರ ಪತ್ನಿ ಅನೀಷಾ ಮಾತನಾಡಿ “ನಾನು ಈಗ ಅನುಭವಿಸುತ್ತಿರುವ ಹೆಮ್ಮೆ ಮತ್ತು ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಿವೃತ್ತಿಯ ಪಂದ್ಯದಲ್ಲಿ ಭಾರತ ಕಂಚಿನ ಪದಕವನ್ನು ಗೆದ್ದಿರುದು ಅತೀವ ಸಂಭ್ರಮ ತಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next