Advertisement

Hockey auction: ಉದಿತಾ ದುಬಾರಿ ಆಟಗಾರ್ತಿ

10:47 PM Oct 15, 2024 | Team Udayavani |

ಹೊಸದಿಲ್ಲಿ: ಮಂಗಳವಾರ ನಡೆದ ವನಿತಾ ಹಾಕಿ ಇಂಡಿಯಾ ಲೀಗ್‌ ಹರಾಜಿನಲ್ಲಿ ಭಾರತದ ಉದಿತಾ ದುಹಾನ್‌ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿ ದ್ದಾರೆ. ಅವರು 32 ಲಕ್ಷ ರೂ.ಗೆ ಬೆಂಗಾಲ್‌ ಟೈಗರ್ ಪಾಲಾದರು. 26 ವರ್ಷದ ಉದಿತಾ ಹರಿಯಾಣದವರು.

Advertisement

29 ಲಕ್ಷ ರೂ.ಗೆ ಒಡಿಶಾ ವಾರಿಯರ್ ಸೇರಿಕೊಂಡ ನೆದರ್ಲೆಂಡ್ಸ್‌ನ ಡ್ರ್ಯಾಗ್‌ಫ್ಲಿಕರ್‌ ಯಿಬ್ಬಿ ಜಾನ್ಸನ್‌ 2ನೇ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಉಳಿದಂತೆ ಭರವಸೆಯ ಆಟಗಾರ್ತಿ ಲಾಲ್‌ರೆಮಿÕಯಾಮಿ 25 ಲಕ್ಷ ರೂ.ಗೆ ಬೆಂಗಾಲ್‌ ಟೈಗರ್, ಸುನೆಲಿತಾ ಟೊಪ್ಪೊ 24 ಲಕ್ಷ ರೂ.ಗೆ ಡೆಲ್ಲಿ ಎಸ್‌ಜಿ ಪೈಪರ್ ಪಾಲಾಗಿ ಗಮನ ಸೆಳೆದರು.

ಭಾರತ ರಾಷ್ಟ್ರೀಯ ತಂಡದ ನಾಯಕಿ ಸಲೀಮಾ ಟೇಟೆ 20 ಲಕ್ಷ ರೂ. ಮೊತ್ತಕ್ಕೆ ಸೂರ್ಮ ಹಾಕಿ ಕ್ಲಬ್‌ ಪಾಲಾದರು.

Advertisement

Udayavani is now on Telegram. Click here to join our channel and stay updated with the latest news.

Next