Advertisement

Hockey ಏಷ್ಯನ್‌ ಚಾಂಪಿಯನ್ಸ್‌  ಟ್ರೋಫಿ: ಇಂದು ಭಾರತ-ಪಾಕ್‌ ಮುಖಾಮುಖಿ

10:48 PM Sep 13, 2024 | Team Udayavani |

ಹುಲುನ್‌ಬಿಯುರ್‌ (ಚೀನ): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿರುವ ಹಾಲಿ ಚಾಂಪಿಯನ್‌ ಭಾರತ, ಶನಿವಾರದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಈ ಪಂದ್ಯವನ್ನೂ ಗೆದ್ದು ಅಜೇಯವಾಗಿ ಸೆಮಿಫೈನಲ್‌ನಲ್ಲಿ ಸೆಣಸುವುದು ಹರ್ಮನ್‌ಪ್ರೀತ್‌ ಸಿಂಗ್‌ ಪಡೆಯ ಯೋಜನೆ.

Advertisement

6 ತಂಡಗಳ ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಈ ಸ್ಪರ್ಧೆಯಲ್ಲಿ ಭಾರತ ಈವರೆಗಿನ ಎಲ್ಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇನ್ನೊಂದೆಡೆ ಅಮ್ಮಾದ್‌ ಬಟ್‌ ನೇತೃತ್ವದ ಪಾಕಿಸ್ಥಾನ 2 ಜಯ ಹಾಗೂ 2 ಡ್ರಾ ಫ‌ಲಿತಾಂಶದೊಂದಿಗೆ ದ್ವಿತೀಯ ಸ್ಥಾನಿಯಾಗಿದೆ.

ಎಷ್ಟೇ ಪಂದ್ಯಗಳನ್ನು ಗೆದ್ದರೂ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು ಮಣಿಸಿದಾಗಲೇ ಭಾರತಕ್ಕೆ ಸಮಾಧಾನ ಹಾಗೂ ಹುರುಪು. ಇದಕ್ಕೆ ಸರಿಯಾಗಿ ಕಳೆದ ಕೆಲವು ವರ್ಷಗಳಿಂದ ಪಾಕ್‌ ಎದುರು ನಮ್ಮವರು ನಿರಂತರ ಮೇಲುಗೈ ಸಾಧಿಸುತ್ತ ಬಂದಿದ್ದಾರೆ. 2023ರ ಹ್ಯಾಂಗ್‌ಝೂ ಏಷ್ಯಾಡ್‌ನ‌ಲ್ಲಿ ಇತ್ತಂಡಗಳು ಕೊನೆಯ ಸಲ ಮುಖಾಮುಖೀ ಆಗಿದ್ದವು. ಇಲ್ಲಿ ಭಾರತ 10-2 ಅಂತರದ ಭರ್ಜರಿ ಜಯ ಸಾಧಿಸಿತ್ತು. ಇದಕ್ಕೂ ಕೆಲವು ತಿಂಗಳು ಮೊದಲು ಚೆನ್ನೈಯಲ್ಲಿ ನಡೆದ ಎಸಿಟಿ ಕೂಟದಲ್ಲಿ 4-0 ಗೆಲುವು ಒಲಿಸಿಕೊಂಡರೆ, 2022ರ ಜಕಾರ್ತಾ ಏಷ್ಯಾ ಕಪ್‌ನಲ್ಲಿ ಯಂಗ್‌ ಇಂಡಿಯಾ 1-1ರಿಂದ ಡ್ರಾ ಮಾಡಿಕೊಂಡಿತ್ತು. 2022ರ ಢಾಕಾ ಎಸಿಟಿಯಲ್ಲಿ 4-3ರ ಜಯ ಸಾಧಿಸಿ ಕಂಚಿನ ಪದಕ ಜಯಿಸಿತ್ತು.

ಅವರು ಸಹೋದರರಂತೆ…
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, “ಜೂನಿಯರ್‌ ಹಂತದಿಂದಲೇ ನಾನು ಪಾಕಿಸ್ಥಾನ ತಂಡದ ಬಹುತೇಕ ಆಟಗಾರರೊಂದಿಗೆ ಆಡಿದ್ದೆ. ನಮ್ಮ ನಡುವೆ ಸ್ಪೆಷಲ್‌ ಬಾಂಡ್‌ ಬೆಸೆದಿದೆ. ಅವರು ನನ್ನ ಸಹೋದರರಂತೆ. ಆದರೆ ಅಂಗಳದಲ್ಲಿ ನಮ್ಮ ಗೆಲುವಿನ ಹೋರಾಟ ಸದಾ ಜಾರಿಯಲ್ಲಿರುತ್ತದೆ. ಎಲ್ಲ ತಂಡಗಳಂತೆ ಪಾಕಿಸ್ಥಾನ ವನ್ನು ಎದುರಿಸುತ್ತೇವೆ. ಭಾವನೆಗ ಳನ್ನು ನಿಯಂತ್ರಣದಲ್ಲಿರಿಸಿಕೊಳ್ಳು ತ್ತೇವೆ. ಅಭಿಮಾನಿಗಳು ಇನ್ನೊಂದು ಭಾರತ- ಪಾಕಿಸ್ಥಾನ ಪಂದ್ಯಕ್ಕೆ ಕಾತರಗೊಂಡಿದ್ದಾರೆ’ ಎಂದರು. ದಿನದ ಉಳಿದ ಪಂದ್ಯಗಳಲ್ಲಿ ಮಲೇಷ್ಯಾ- ಕೊರಿಯಾ, ಚೀನ- ಜಪಾನ್‌ ಎದುರಾಗಲಿವೆ.

ಆರಂಭ: ಅ. 1.15

Advertisement
Advertisement

Udayavani is now on Telegram. Click here to join our channel and stay updated with the latest news.

Next