Advertisement

Hockey ಏಷ್ಯನ್‌ ಚಾಂಪಿಯನ್ಸ್‌  ಟ್ರೋಫಿ: ಚೀನವನ್ನು ಮಣಿಸಿದ ಭಾರತ

12:27 AM Sep 09, 2024 | Team Udayavani |

ಹುಲುನ್‌ಬುಯುರ್‌ (ಚೀನ): ಹಾಲಿ ಚಾಂಪಿಯನ್‌ ಭಾರತ “ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ’ ಹಾಕಿ ಕೂಟದ ಮೊದಲ ಪಂದ್ಯದಲ್ಲಿ ಆತಿಥೇಯ ಚೀನವನ್ನು 3-0 ಗೋಲುಗಳಿಂದ ಮಣಿಸಿದೆ.

Advertisement

ಸುಖ್‌ಜೀತ್‌ ಸಿಂಗ್‌ (14ನೇ ನಿಮಿಷ), ಉತ್ತಮ್‌ ಸಿಂಗ್‌ (27ನೇ ನಿಮಿಷ) ಮತ್ತು ಅಭಿಷೇಕ್‌ (32ನೇ ನಿಮಿಷ) ಭಾರತದ ಗೋಲುವೀರರು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಮೊದಲ ಪಂದ್ಯ ಆಡಿದ ಭಾರತ, ರಕ್ಷಣಾ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿತು. ಹೀಗಾಗಿ ಚೀನಕ್ಕೆ ಗೋಲು ಗಳಿಕೆ ಸಾಧ್ಯವಾಗಲಿಲ್ಲ. ಸೋಮವಾರ ಭಾರತ-ಜಪಾನ್‌ ಮುಖಾಮುಖೀ ಆಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next