Advertisement

World cup Cricket; ತಪ್ಪಿದ ಅವಘಡ: ಸೀಟುಗಳ ಮೇಲೆ ಬಿದ್ದ ಹೋರ್ಡಿಂಗ್‌ಗಳು!

09:34 PM Oct 16, 2023 | Team Udayavani |

ಲಕ್ನೋ: ಸೋಮವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಬಲವಾದ ಗಾಳಿಯಿಂದಾಗಿ ಕ್ರೀಡಾಂಗಣದ ಮೇಲ್ಛಾವಣಿಯಿಂದ ಕೆಳಗಿನ ಸೀಟುಗಳ ಮೇಲೆ ಹಲವಾರು ಹೋರ್ಡಿಂಗ್‌ಗಳು ಬಿದ್ದವು.

Advertisement

ಮಳೆ ಕೆಲ ಕಾಲ ಆಟವನ್ನು ನಿಲ್ಲಿಸಲು ಕಾರಣಾವಾಯಿತು. ಬಳಿಕ ಬಲವಾದ ಭಾರೀ ಗಾಳಿಯು ಹಲವಾರು ಕಬ್ಬಿಣದ ಬದಿಗಳಿಂದ ಕೂಡಿದ ಹೋರ್ಡಿಂಗ್‌ಗಳು ಬೀಳಲು ಕಾರಣವಾಯಿತು, ಛಾವಣಿಯಿಂದ ಕೆಳ ಹಂತಗಳಲ್ಲಿ ಕುಳಿತಿದ್ದ ಜನರ ಮೇಲೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಗಳಿತ್ತು. ಪಂದ್ಯ ವೀಕ್ಷಿಸುತ್ತಿದ್ದವರಲ್ಲಿ ಭಯವನ್ನು ಉಂಟುಮಾಡಿತು. ಅದೃಷ್ಟವಶಾತ್ ಸ್ಟ್ಯಾಂಡ್ ಬಹುಪಾಲು ಖಾಲಿಯಾಗಿತ್ತು. ಆದಾಗ್ಯೂ, ಘಟನೆಯ ಬಳಿಕ ಪ್ರಕಟಣೆಯಲ್ಲಿ ಹೆಚ್ಚಿನ ಆಸನಗಳ ಸುರಕ್ಷತೆಗೆ ತೆರಳಲು ಪ್ರೇಕ್ಷಕರನ್ನು ಕೇಳಿಕೊಳ್ಳಲಾಯಿತು.

ಎರಡನೇ ಇನ್ನಿಂಗ್ಸ್ ಆರಂಭವಾಗುವ ವೇಳೆಗೆ ಭದ್ರತಾ ಸಿಬಂದಿಗಳು ಎಲ್ಲಾ ಪ್ರೇಕ್ಷಕರನ್ನು ಮೇಲಿನ ಸೀಟುಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು.

ಕ್ರೀಡಾಂಗಣದಲ್ಲಿ ಮೊದಲ ವಿಶ್ವಕಪ್ ಪಂದ್ಯ ಆಸ್ಟ್ರೇಲಿಯ ವಿರುದ್ಧ ದಕ್ಷಿಣ ಆಫ್ರಿಕಾ ಕಳೆದ ವಾರ ಆಯೋಜಿಸಲಾಗಿತ್ತು.ಅಕ್ಟೋಬರ್ 29 ರಂದು ಎಕಾನಾ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನು ಆಯೋಜಿಸಲಾಗಿದೆ.

ಆಸೀಸ್ ಗೆ ಜಯ
ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 43.3 ಓವರ್ ಗಳಲ್ಲಿ 209 ರನ್ ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಆಸೀಸ್ 35.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ 5 ವಿಕೆಟ್ ಗಳಿಂದ ಜಯಭೇರಿ ಬಾರಿಸಿ ಈ ವಿಶ್ವಕಪ್ ನಲ್ಲಿ ಮೊದಲ ಗೆಲುವನ್ನು ಸಂಭ್ರಮಿಸಿಕೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next