Advertisement
ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಶಂಕರರೆಡ್ಡಿ, ಗೌರಿಬಿದನೂರು ನಗರಸಭೆಯ ಅಧಿಕಾರಾವಧಿ ಮುಗಿದಿದ್ದು, ಆಡಳಿತಾಧಿಕಾರಿಗಳು ಅಧಿಕಾರ ನಡೆಸುತ್ತಿದ್ದಾರೆ ಆದ್ದರಿಂದ ಸಮಸ್ಯೆ ಸ್ಪಂದಿಸುವಲ್ಲಿ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಸರ್ಕಾರ ಜನರ ಸಮಸ್ಯೆಗೆ ಎಲ್ಲಾ ರೀತಿಯಲ್ಲಿಯೂ ಸ್ಪಂದಿಸಲಿದ್ದು ಆದ್ಯತೆಯ ಮೇಲೆ ಪರಿಹರಿಸಲಾಗುವುದು ಎಂದರು. ಗೌರಿಬಿದನೂರು ನಗರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
Related Articles
Advertisement
ಚಿಕ್ಕಬಳ್ಳಾಪುರ-ಮಧುಗಿರಿಗೆ ರಸ್ತೆ: ಕಂದಾಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಂಡಿರುವವರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ 94 ಸಿಸಿ ಕಾನೂನಿನ ಪ್ರಕಾರ ಮಂಜೂರಾತಿ ಪತ್ರವನ್ನು ನೀಡಲು ತಹಶೀಲ್ದಾರ್ ಎಲ್ಲ ರೀತಿಯ ತಯಾರಿಸಿ ನಡೆಸಿದ್ದು, ಹಕ್ಕು ಪತ್ರ ನೀಡಲು ತಯಾರಿಸಿ ನಡೆಸಿದ್ದಾರೆ. ಮಾದವ ನಗರದ ಬಳಿಯಿಂದ ಎಪಿಎಂಸಿ ಬಳಿ ವರೆಗೆ ರಸ್ತೆ ಕಾಮಗಾರಿ ನಡೆಯುತಿದ್ದು ಬೈಪಾಸ್ ರಸ್ತೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು ಚಿಕ್ಕಬಳ್ಳಾಪುರ ರಸ್ತೆಯಿಂದ ಮಧುಗಿರಿ ರಸ್ತೆಗೆ ನೇರವಾಗಿ ತೆರಳಬಹುದು ಎಂದರು.
ನಗರದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಕಳೆದ ವರ್ಷ ಪ್ರಾರಂಭಿಸಲಾಗಿದ್ದು ಈ ಶಾಲೆಯ ಕಟ್ಟಡ ಹಾಗೂ ಮೈದಾನಕ್ಕಾಗಿ ಮಂಚನಹಳ್ಳಿ ರಸ್ತೆಯಲ್ಲಿ ಹತ್ತು ಎಕರೆ ಭೂಮಿಯನ್ನು ಪಡೆಯಲಾಗಿದ್ದು ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ.ಮರಳೂರು ಬಳಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆ ಸಂಬಂಧ ಹೆಚ್ಚು ಅರ್ಜಿ: ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ, ನಗರವ್ಯಾಪ್ತಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಇಂದು ಕುಂದುಕೊರತೆ ಸಭೆಯನ್ನು ನಡೆಸಲಾಗುತ್ತಿದ್ದು ಮನವಿ ಸಲ್ಲಿಸುವ ನಾಗರೀಕರಿಗೆ ಸ್ಥಳದಲ್ಲಿಯೇ ಆಯಾ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್, ಮನೆಮಂಜೂರಾತಿ ಪತ್ರ, ಉದ್ದಿಮೆ ಪರವಾನಿಗೆ ಪತ್ರ, ಮನಸ್ವಿನಿ ಪತ್ರ, ಹಕ್ಕು ಪತ್ರ ಸೇರಿದಂತೆ ವಿವಿಧ ಸವಲತ್ತುಗಳನ್ನು ಸಚಿವರು ವಿತರಿಸಿದರು. ಒಟ್ಟು 233 ಅರ್ಜಿಗಳು ಬಂದಿದ್ದವು. ಶೇ. 90 ರಷ್ಟು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದು ಬಂದಿದೆ ಎಂದು ತಹಸೀಲ್ದಾರ್ ಮತ್ತು ಪೌರಾಯುಕ್ತರು ತಿಳಿಸಿದರು.
ಸಭೆಯಲ್ಲಿ ನಗರಸಭೆ ಆಯುಕ್ತ ಉಮಾಕಾಂತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮೇಶ್, ನಗರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕಲೀಂಉಲ್ಲಾ, ಮುಖಂಡರಾದ ಪ್ರಕಾಶ್‌ರೆಡ್ಡಿ, ಶಫೀಕ್‌ಖಾನ್, ಗೋಪಿನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಗೀತಾಜಯಂಧರ್, ಮರಳೂರು ಹನುಮಂತರೆಡ್ಡಿ, ವಿ.ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೆಪ್ಟೆಂಬರ್ ವೇಳೆಗೆ ನೀರು: ಗೌರಿಬಿದನೂರು ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಬ್ಟಾಳದ ಎಚ್.ಎನ್.ವ್ಯಾಲಿ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಿಸಿ ನಗರ ಸಮೀಪದ ಕಿಂಡಿಬಳಿಗೆ ತಂದು ಅಲ್ಲಿಂದ 8 ಕೆರೆಗಳಿಗೆ ನೀರು ತುಂಬಿಸಲಾಗುವುದು ಕೆರೆಗಳಲ್ಲಿ ನೀರು ತುಂಬಿದಲ್ಲಿ ಕೊಳವೇ ಭಾವಿಗಳಲ್ಲಿ ಅಂತರ್ಜಲ ಹೆಚ್ಚಿ ನೀರು ಮರುಪೂರಣವಾಗಲಿದು ಗೌರಿಬಿದನೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಸೆಪ್ಟೆಂಬರ್ ವೇಳೆಗೆ ನೀರು ಹರಿಯಲಿದೆ ಎಂದರು.