Advertisement

‘ಹೀಗೆ ಬಂದು ಹಾಗೆ ಹೋದ್ರು’..: ಐದು ನಿಮಿಷಕ್ಕೆ ಸೀಮಿತವಾಯ್ತು ಗೃಹ ಸಚಿವರ ಘಟನಾ ಸ್ಥಳ ಭೇಟಿ

02:48 PM Aug 27, 2021 | Team Udayavani |

ಮೈಸೂರು: ಮೈಸೂರಿನ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರೂ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಇಂದು ಮಧ್ಯಾಹ್ನದವರೆಗೆ ಇತರ ಓಡಾಟದಲ್ಲೇ ನಿರತರಾಗಿದ್ದ ಗೃಹ ಸಚಿವರು ಕೊನೆಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಗೃಹ ಸಚಿವ ಭೇಟಿ ಮಾತ್ರ ಹೀಗೆ ಬಂದು ಹಾಗೆ ಹೋದಂತಿತ್ತು.

Advertisement

ಲಲಿತಾದ್ರಿ ಬಡಾವಣೆಗೆ ನಾಮಕವಾಸ್ತೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಸ್ತೆಯಲ್ಲಿ ನಿಂತು ತನ್ನ ‘ಕರ್ತವ್ಯ’ ನಿಭಾಯಿಸಿದರು. ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದ ಗೃಹ ಸಚಿವರು, ಈ ವೇಳೆಯು ಯಾವುದೋ ಕರೆಯಲ್ಲಿ ನಿರತರಾಗಿದ್ದರು. ಬಳಿಕ ಪೊಲೀಸ್ ಆಯಕ್ತರಿಂದ ಒಂದು‌ ನಿಮಿಷದ ಮಾಹಿತಿ ಪಡೆದು ರಸ್ತೆಯಿಂದ ಆಚೆಗೆ ಘಟನಾ ಸ್ಥಳಕ್ಕೂ ಹೋಗದೆ ಅಲ್ಲಿಂದಲೇ ತೆರಳಿದರು. ರಾಜ್ಯದ ಗೃಹ ಸಚಿವರ ಭೇಟಿ ಕೇವಲ ಐದು ನಿಮಿಷಕ್ಕೆ ಮಾತ್ರ ಸೀಮಿತವಾಗಿತ್ತು.

ಇದನ್ನೂ ಓದಿ:ಗೃಹ ಸಚಿವರು ಮಹಿಳೆಯರ ಬಗ್ಗೆ ಕಾಳಜಿಯಿಂದ ಆ ಹೇಳಿಕೆ ಕೊಟ್ಟಿದ್ದಾರೆ: ಪೂರ್ಣಿಮಾ ಶ್ರೀನಿವಾಸ್

ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಸಚಿವ ತೆರಳಿದರು. ಗೃಹ ಸಚಿವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

Advertisement

ಗುರುವಾರ ರಾತ್ರಿ ಮೈಸೂರಿಗೆ ಆಗಮಿಸಿದ ಗೃಹ ಸಚಿವರು, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ ಮಾಡಿದ್ದರು. ಈಗ ಕರ್ನಾಟಕ ಪೊಲೀಸ್ ಅಕಾಡೆಮಿ, ಆಯುಕ್ತರ ಭವನ ಸುತ್ತುತ್ತ ಕಾಲ ಹರಣ ಮಾಡಿದ್ದಾರೆಯೇ ಹೊರತು, ಸಾಮೂಹಿಕ ಅತ್ಯಾಚಾರ ನಡೆದ ಘಟನಾ ಸ್ಥಳಕ್ಕಾಗಲಿ, ಸಂತ್ರಸ್ತೆಯ ಬಳಿಗಾಗಲಿ ಹೋಗಿರಲಿಲ್ಲ. ಮಧ್ಯಾಹ್ನದ ಬಳಿಕ ಹೋದರೂ ನಾಮಕಾವಸ್ತೆ ಭೇಟಿಯನ್ನಷ್ಟೇ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next