Advertisement

ಎಚ್‌ಎಲ್‌ಸಿ ಕಾಲುವೆ  ಪರಿಶೀಲನೆ

06:11 PM Sep 17, 2017 | |

ಕುರುಗೋಡು: ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದ ಹತ್ತಿರದ ಎಚ್‌ ಎಲ್‌ಸಿ ಕಾಲುವೆಯ ಎಸ್ಕೆಪ್‌ ಶೆಟ್ಟರ್‌ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಸ್ಥಳಕ್ಕೆ ಕುರುಗೋಡು ವಿಶೇಷ ತಹಶೀಲ್ದಾರ್‌ ಬಸವರಾಜ್‌, ಉಪ ತಹಶೀಲ್ದಾರ್‌ ಶೆಷಾವಲಿ, ಗ್ರಾಮ ಲೆಕ್ಕಾಧಿಕಾರಿ ಮಹಮ್ಮದ್‌ ಷಫಿ , ಕೃಷಿ ಅಧಿಕಾರಿ ಎಂ.ದೇವರಾಜ್‌ ಎಚ್‌ಎಲ್‌ಸಿ ಕಾಲುವೆಯ ಸೆಕ್ಸನ್‌ ಅಧಿಕಾರಿ ಭಾಸ್ಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕಾಲುವೆ ಒಡೆದ ಪರಿಣಾಮ ಏಳುಬೆಂಚಿ ಗ್ರಾಪಂ ಮತ್ತು ಸಿದ್ದಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಮಾರು 500ರಿಂದ 600 ಎಕರೆ ಪ್ರದೇಶದ ರೈತರ ಜಮೀನುಗಳಿಗೆ ನೀರು ನುಗ್ಗಿ ಮೆಣಸಿನಕಾಯಿ, ಹತ್ತಿ, ಭತ್ತದ ಬೆಳೆಗಳು ಹಾನಿಯಾಗಿದ್ದು, ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತುಂಗಭದ್ರಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಪುರುಷೋತ್ತಮಗೌಡ, ಶಂಕರ್‌ ಸಿಂಗ್‌ಕ್ಯಾಂಪ್‌ ಡಿ.ಶಿವಯ್ಯ, ಕುಡುತಿನಿ ಪೊಂಪಾಪತಿ, ಶ್ರೀಧರಗಡ್ಡೆ ವೀರಗನಗೌಡ, ಏಳುಬೆಂಚಿ ಗ್ರಾಮದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next