Advertisement
ಪ್ರದೇಶಗಳು ಅಭಿವೃದ್ಧಿಗೊಳ್ಳುತ್ತಿರುವ ಭರಾಟೆಯಲ್ಲಿ ಹಿಂದಿನ ಕಾಲದ ಇತಿಹಾಸವು ಗತಿಸಿದ ಘಟನಾವಳಿಗಳು ಮೆಲುಕು ಹಾಕಲು ಇಂದಿನ ಸಮಾಜದಲ್ಲಿ ಪೂರ್ವ ಜನರ ಸಂಖ್ಯೆಯೂ ಸಹ ನಶಿಸಿವೆ. ಹೀಗಿರುವಾಗ ಗತವೈಭವದ ತಾಣಗಳನ್ನು ಇಂದಿನ ಪೀಳಿಗೆಗೆ ಪರಿಚಯವಾದರೂ ಹೇಗೆ ಸಿಗಲಿದೆ ಎಂಬುವುದನ್ನು ಇತಿಹಾಸ ಸಂಶೋಧಕ ಹಾಗೂ ಸಾಹಿತಿ ಬಿಟ್ಟಸಂದ್ರಗುರುಸಿದ್ಧಯ್ಯ ಅವರು ಬೆಂಬಿಡದಂತೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವುದರ ಮೂಲಕ ಹಳ್ಳಿಹಳ್ಳಿ ತಿರುಗಿ, ಗ್ರಾಮಗಳ ಇತಿಹಾಸ ಮತ್ತು ಅಲ್ಲಿನ ಪ್ರಾಮುಖ್ಯತೆ ಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವುದು ನಿಜಕ್ಕೂ ವಿಸ್ಮಯವನ್ನುಂಟು ಮಾಡುತ್ತದೆ.
Related Articles
Advertisement
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣ ಗ್ರಾಪಂ ಪಿಡಿಒ ಸಿ.ಮುನಿರಾಜು, ಕಾರ್ಯದರ್ಶಿ ಡಿ.ಎನ್. ಮಂಜುನಾಥ್, ಗ್ರಾಪಂ ಸದಸ್ಯ ಹ್ಯಾಡಾಳ ಚನ್ನಕೇಶವ, ಗ್ರಾಮದ ಮುಖಂಡರು ಇದ್ದರು.
ಶಿಲಾ ಶಾಸನ -100ಕ್ಕೂ ಹೆಚ್ಚು ವೀರಗಲ್ಲು ಪತ್ತೆ : ಈಗಾಗಲೇ ಸುಮಾರು 5 ವರ್ಷಗಳಿಂದ ತಾಲೂಕಿನಾದ್ಯಂತ ಇರುವ ಗ್ರಾಮಗಳಲ್ಲಿ ಈವರೆಗೆ 60ಕ್ಕೂ ಹೆಚ್ಚು ಅಪ್ರಕಟಿತ ಶಿಲಾ ಶಾಸನ ಹಾಗೂ 100ಕ್ಕೂ ಹೆಚ್ಚು ವೀರಗಲ್ಲುಗಳನ್ನು ಸ್ವಿಚ್ಚೆಯಿಂದ ಪತ್ತೆ ಹಚ್ಚಿ ಅವುಗಳನ್ನು ಸ್ಥಳದಲ್ಲಿಯೇ ಸಂರಕ್ಷಣೆ ಮಾಡಲಾಗಿದ್ದು, ಈವರೆಗೂ ದೊರೆತಿರುವ ಶಿಲಾ ಶಾಸನ ಹಾಗೂ ಪ್ರಾಚ್ಯ ವಸ್ತು ಸ್ಮಾರಕಗಳನ್ನು ಜಿಲ್ಲಾಡಳಿತ ಭವನದ ಸಮೀಪ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ಇವುಗಳನ್ನು ಸಂರಕ್ಷಣೆ ಮಾಡಿದಲ್ಲಿ ತಾಲೂಕಿನ ಇತಿಹಾಸದ ಮಹತ್ವವನ್ನು ಮುಂದಿನ ಯುವಪೀಳಿಗೆಗೆ ಹಾಗೂ ಇತಿಹಾಸಕಾರರಿಗೆ ತುಂಬಾ ಪ್ರಯೋಜನವಾಗಲಿದೆ ಎಂದರು.
ಚನ್ನರಾಯಪಟ್ಣಣ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿರುವ ಪ್ರಾಚ್ಯವಸ್ತು ಶಿಲಾ ಶಾಸನಗಳು, ಮಾಸ್ತಿಗಲ್ಲು-ವೀರಗಲ್ಲುಗಳನ್ನು ನರೇಗಾ ಯೋಜನೆಯಡಿ, ದಾನಿಗಳ ನೆರವಿನಿಂದ ಸಂರಕ್ಷಣೆ ಮಾಡಲಾಗುತ್ತದೆ. – ಸಿ.ವೈ.ಮಂಜುನಾಥ್, ಗ್ರಾಪಂ ಅಧ್ಯಕ್ಷ