Advertisement

“ಇತಿಹಾಸ ವೈಭವೀಕರಿಸುವ, ಅವಹೇಳನ ಮಾಡುವ ವಿಷಯವಲ್ಲ’

03:22 PM Apr 22, 2017 | Team Udayavani |

ಉಡುಪಿ: ಇತಿಹಾಸ ವೈಭವಿಕರಿಸುವ ಅಥವಾ ಅವಹೇಳನ ಮಾಡುವ ವಿಷಯ ಅಲ್ಲ. ಇತಿಹಾಸದ ಕೇಂದ್ರಬಿಂದು ಮಾನವ ಬದುಕು ಹೊರತು ಅರಸರು ಅಥವಾ ಅಂತಪುರವಲ್ಲ. ಇದು ನಿರಂತರ ಪರಿಷ್ಕರಣೆ ಆಗಬೇಕಾದ ವಿಷಯ. ಈಗಿನ ಸಮಾಜ ಸೃಷ್ಠಿಸುವ ಸಂವೇದನೆಗಳು ಹಿಂದಿನ ಕಾಲದ ಸಮಾಜವನ್ನು ಅರ್ಥೈಸಲು ಪ್ರೇರೇಪಿಸುತ್ತದೆ. ಇದರಿಂದ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯ ಎಂದು ಮಂಗಳೂರು ವಿ.ವಿ.ಯ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ| ಬಿ. ಸುರೇಂದ್ರ ರಾವ್‌ ಹೇಳಿದರು.

Advertisement

ಅವರು ಉಡುಪಿ ಅಜ್ಜರಕಾಡಿನ ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲ ಪೊ›| ಬಿ.ಜಗದೀಶ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಭಾಸ್ಕರ್‌ ಶೆಟ್ಟಿ ಸ್ವಾಗತಿಸಿ, ಡಾ| ಗುರುರಾಜ್‌ ಪ್ರಭು ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next