Advertisement

ಐತಿಹಾಸಿಕ ಮುದಗಲ್ಲಗೆ ಭಕ್ತರು ದಂಡು

05:11 PM Sep 22, 2018 | |

ಮುದಗಲ್ಲ: ಐತಿಹಾಸಿಕ ಮುದಗಲ್ಲ ಮೊಹರಂಗೆ ಲಕ್ಷಾಂತರ ಭಕ್ತರ ಮಧ್ಯೆ ಹಸನ್‌-ಹುಸೇನ್‌ರ ಆಲಂಗಳ ಸಾಮೂಹಿಕ ಭೇಟಿಯಿಂದ ಶುಕ್ರವಾರ ಸಂಭ್ರಮದ ತೆರೆ ಬಿದ್ದಿತು. ಕಳೆದ ಒಂಭತ್ತು ದಿನಗಳಿಂದ ಆರಂಭವಾದ ಮೊಹರಂ ಹಬ್ಬಕ್ಕೆ ಪಟ್ಟಣದ ಐತಿಹಾಸಿಕ ಕೋಟೆ ಮುಂಭಾಗದ ಚಾವಡಿಕಟ್ಟೆಯ ಮೈದಾನದಲ್ಲಿ ವೆಂಕಟರಾಯನಪೇಟೆಯ ಕಾಸೀಂಪೀರ, ಕಿಲ್ಲಾದ ಅಲಿ-ಅಬ್ಟಾಸಲಿ, ಮೇಗಳಪೇಟೆಯ ಹಸನ್‌-ಕಿಲ್ಲಾದ ಹುಸೇನ್‌ ಅಲಾಯಿಗಳು ಸಾಮೂಹಿಕವಾಗಿ ಭೇಟಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು ಹಸನ್‌-ಹುಸೆನ್‌ ರ ಐತಿಹಾಸಿಕ ಭೇಟಿಯ ಸಮಯದಲ್ಲಿ ಸಿಡಿ ಮದ್ದುಗಳು ಆಕಾಶದೆತ್ತರಕ್ಕೆ ನೆಗೆದು ನಕ್ಷತ್ರದಂತೆ ಮಿಂಚುತ್ತಿರುವುದು ಒಂದೆಡೆಯಾದರೆ, ಭಕ್ತರ ಘೋಷಣೆಗಳು ಮೊಳಗುತ್ತಿದ್ದವು.
ಉತತ್ತಿ, ಹೂವು ಎಸೆಯುವ ಮೂಲಕ ಭಕ್ತರ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡರು.

Advertisement

ಮಧ್ಯಾಹ್ನದಿಂದಲೇ ಮಳೆ ಆರಂಭವಾಯಿತು. ಇದರಿಂದಾಗಿ ಅಲಾಯಿಗಳ ದರ್ಶನಕ್ಕೆ ಆಗಮಿಸಿದ್ದ ಭಕ್ತರು ದೇವರ ಭೇಟಿಯ ಕ್ಷಣಗಳನ್ನು ಕಣ್ಣುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಮಳೆಯಿಂದ ತಪ್ಪಿಸಿಕೊಳ್ಳಲು ಭಕ್ತರು ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಕೋಟೆಯ ತಡೆಗೋಡೆಯ ಆಶ್ರಯ ಪಡೆದರು.

ವರುಣನ ಆಗಮನದ ನಡುವೆಯೂ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು. ಸುಂದರ ದೃಶ್ಯ
ವೀಕ್ಷಿಸಲು ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ  ಸೈ. ಮೋಹಿದ್‌ ಅಲ್ತಾಫ್‌, ಶಾಸಕರಾದ ಡಿ.ಎಸ್‌. ಹೂಲಗೇರಿ, ಅಮರೇಗೌಡ ಪಾಟೀಲ ಬಯ್ನಾಪುರ, ಮಾಜಿ ಶಾಸಕ ಹಸನ್‌ಸಾಬ ದೋಟಿಹಾಳ, ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು, ಸಹಾಯಕ ಆಯುಕ್ತ ಎಂ. ಪಿ. ಮಾರುತಿ, ಸಿದ್ದು ಬಂಡಿ, ಭೂಪನಗೌಡ, ಅಮರಗುಂಡಪ್ಪ ಮೇಟಿ, ಶರಣಪ್ಪ ಸುಬೇದಾರ, ತಹಶೀಲ್ದಾರ್‌ ಚಾಮರಸ ಪಾಟೀಲ, ಅಶೋಕಗೌಡ ಪಾಟೀಲ, ಅಮೀರಬೇಗ್‌ ಉಸ್ತಾದ, ಮಹ್ಮದ ಸಾಕಲಿ, ಎಸ್‌.ಆರ್‌. ರಸೂಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next