Advertisement

Bellary; ಮೊಹರಂ ಆಚರಣೆ ವೇಳೆ ಅವಘಡ; ಜನರ ಭಾರದಿಂದ ಕುಸಿದ ರೂಫ್ ಶೀಟ್

12:13 PM Jul 19, 2024 | Team Udayavani |

ಬಳ್ಳಾರಿ: ನಗರದಲ್ಲಿ ಮೊಹರಂ ಆಚರಣೆ ವೇಳೆ ಅವಘಡವೊಂದು ನಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.

Advertisement

ಮೊಹರಂ ಆಚರಣೆ ವೇಳೆ ಪೀರಲ ದೇವರ ಮೆರವಣಿಗೆ ನೋಡಲೆಂದು ನಗರದ ಹೊರವಲಯದ ಹಳೇ ಬೈಪಾಸ್ ರಸ್ತೆಯ ಮನೆಯ ಮೇಲಿನ ತಗಡಿನ ರೂಫ್ ಶೀಟ್ ಮೇಲೆ ಹೆಚ್ಚು ಜನರು ಕೂತಿದ್ದರು.

ಭಾರ ತಡೆಯದೆ ಅದು ಕುಸಿದು ಬಿದ್ದಿದೆ. ಇದರಿಂದಾಗಿ ಅದರ ಮೇಲಿದ್ದ ನೂರಕ್ಕೂ ಹೆಚ್ಚು ಜನರು ಒಬ್ಬರ ಮೇಲೋಬ್ವರು ಬಿದ್ದಿದ್ದಾರೆ. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಿಟ್ಟರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next