Advertisement

ಐತಿಹಾಸಿಕ ದೇಸಾರಬಾವಿಗೆ ಇಲ್ಲ  ಬೇಲಿ

04:58 PM Jun 13, 2021 | Team Udayavani |

ಗೇಟ್‌-ತಂತಿ ಬೇಲಿ ಅಳವಡಿಸಿ ಕಾವಲುಗಾರರನ್ನು ನೇಮಿಸಲು ಸಾರ್ವಜನಿಕರ ಆಗ್ರಹ

Advertisement

ತೇರದಾಳ: ಇಲ್ಲಿನ 12ನೇ ಶತಮಾನದ ಐತಿಹಾಸಿಕ ದೇಸಾರಬಾವಿಗೆ ತಂತಿ ಬೇಲಿ ಹಾಗೂ ಗೇಟ್‌ ಅಳವಡಿಸಿ ಕಾವಲುಗಾರರನ್ನು ನೇಮಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಲ್ಲಮಪ್ರಭುವಿನ ಸುಕ್ಷೇತ್ರವಾದ ಪಟ್ಟಣದಲ್ಲಿ ಬಹು ವರ್ಷಗಳಿಂದ ಹಾಳು ಬಿದ್ದ ಐತಿಹಾಸಿಕ ದೇಸಾರಬಾವಿಯು ಅಭಿವೃದ್ಧಿ ಭಾಗ್ಯ ಪಡೆದರೂ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಮಕ್ಕಳ ಜೀವಹಾನಿ ಅಪಘಾತಗಳು ಸಂಭವಿಸುತ್ತಲಿವೆ. ಎರಡು ಪುಟ್ಟ ಮಕ್ಕಳನ್ನು ಬಲಿ ಪಡೆದರೂ ಆ ಬಗ್ಗೆ ಕೇಳುವವರೇ ಇಲ್ಲವಾಗಿದೆ. ಬಾವಿಯ ಸುತ್ತಲೂ ಚಿಕ್ಕ-ಪುಟ್ಟ ಮಕ್ಕಳು ಆಟವಾಡುತ್ತಿರುತ್ತಾರೆ. ಈಗಂತೂ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ಬಿಡುವು. ಹೀಗಾಗಿ ಅಲ್ಲಿ ಆಟವಾಡುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಜನತೆ ತೀವ್ರ ಆತಂಕದಲ್ಲಿದ್ದು, ಇನ್ನಾದರೂ ಸಂಬಂಧಿ ಸಿದವರು ಹೆಚ್ಚಿನ ಪ್ರಾಣ ಹಾನಿಗಳಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಶಾಸಕಿ, ಅಂದಿನ ಸಚಿವೆ ಉಮಾಶ್ರೀ ಅಧಿಕಾರಾವಧಿಯಲ್ಲಿ ದೇಸಾರ ಬಾಯಿಯ ಪಾವಿತ್ರತೆ ತಿಳಿದು ತಾವೇ ವಿಶೇಷ ಮುತುವರ್ಜಿ ವಹಿಸಿ, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ 13ನೇ ಹಣಕಾಸು ಯೋಜನೆಯ 60 ಲಕ್ಷ ರೂ. ಅನುದಾನದಡಿಯಲ್ಲಿ ಬಾವಿಯ ಅಭಿವೃದ್ಧಿ ಕಾಮಗಾರಿ ಕೈಗೊಂಡರು. ನಿರ್ಲಕ್ಷéಕ್ಕೆ ಒಳಗಾದ ಬಾವಿಯಲ್ಲಿ ಮೊದಲು ಕಲ್ಮಷ ತುಂಬಿ ಹೋಗಿತ್ತು. ಬಾವಿಯಲ್ಲಿನ ಗಲೀಜು, ಮಣ್ಣು ಹೊರತೆಗೆದು, ತಳದಿಂದ ಬೃಹತ್‌ ಕಲ್ಲಿನ ಕಟ್ಟಡ ಮಾಡಲಾಗಿದೆ.

ಗುಳೇದಗುಡ್ಡದ ಕಲ್ಲುಗಳಿಂದ ಕಟ್ಟಡ ಕೆಲಸ ಮಾಡಿದ್ದಾರೆ. ರೇಣುಕಾ ಸವದತ್ತಿಯ ಜೋಗುಳಬಾವಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪುಷ್ಕರಣಿ ಮಾಡಿ ಸುತ್ತಲೂ ಸ್ಟೀಲ್‌ ಗ್ಯಾಲರಿ, ತಂತಿ ಬೇಲಿ ಹಾಕಿಸಿ, ಮುಂದುಗಡೆ ಸುಂದರ ಉದ್ಯಾನ ಮಾಡುವ ಕನಸನ್ನು ಉಮಾಶ್ರೀ ಕಂಡಿದ್ದರು. ಆದರೆ ಅನುದಾನ ಸಾಲದಾದಾಗ ಮತ್ತೆ 80 ಲಕ್ಷ ರೂ. ಅನುದಾನ ತಂದರು. ಹೀಗೆ ಒಟ್ಟು 1.4ಕೋಟಿ ಅನುದಾನದಲ್ಲಿ ಅಲ್ಲಮಪ್ರಭು ಪುಷ್ಕರಣಿ ಕಾರ್ಯ ನಡೆದಿತ್ತು. ಆದರೆ ಇಲಾಖೆಯ ಉದಾಸೀನತೆಯಿಂದ ಪುಷ್ಕರಣಿ ಸುತ್ತಲಿನ ಬೇಲಿ, ಉದ್ಯಾನದ ನಿರ್ಮಾಣ, ವಿದ್ಯುತ್‌ ದೀಪಗಳ ಅಳವಡಿಕೆ ಈವರೆಗೂ ಸಾಧ್ಯವಾಗಿಲ್ಲ. ಈ ಕುರಿತು ಅಂದು ಪ್ರಾಚ್ಯವಸ್ತು ಇಲಾಖೆಯ ಧಾರವಾಡದ ಉಪ ನಿರ್ದೇಶಕ ಡಾ. ವಾಸುದೇವ ಅವರನ್ನು ವಿಚಾರಿಸಿದಾಗ ಅವರು ತೇರದಾಳದ ದೇಸಾರಬಾವಿಯ ಅಭಿವೃದ್ಧಿ ಕಾಮಗಾರಿಯು ಕ್ರಿಯಾಯೋಜನೆ ಅಂದಾಜು ಮಾಡಿದ್ದಕ್ಕಿಂತ ಹೆಚ್ಚು ಆಳವಾಗಿ ಮಣ್ಣು ತೆಗೆದು ಕಲ್ಲಿನ ಕಟ್ಟಡ ಮಾಡಬೇಕಾಯಿತು. ಹೀಗಾಗಿ ಕಾಮಗಾರಿಯು ಯೋಜನೆಯಲ್ಲಿ ಸೂಚಿಸಿದ ಹಣದಲ್ಲಿ ಈಗ ಸಿದ್ಧವಾಗಿದೆ. ಆದರೆ ತಡೆಗೋಡೆ, ಗಾರ್ಡನ್‌ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ಅವಶ್ಯಕತೆಯಿದೆ. ಅಲ್ಲದೆ ಬಾವಿಯ ಸುತ್ತಲೂ ತಡೆಗೋಡೆ ನಿರ್ಮಿಸಲು ಕೆಲವರು ಜಾಗೆಯ ತಕರಾರು ಮಾಡಿದ್ದರಿಂದ ಅದು ಸಾಧ್ಯವಾಗಲಿಲ್ಲ.

Advertisement

ಈಗ ಮತ್ತೆ ಕ್ರಿಯಾ ಯೋಜನೆ ಮಾಡಿ, ಸ್ಥಳದ ಲಭ್ಯತೆಯಿದ್ದರೆ ಅನುದಾನ ಬಂದ ನಂತರ ಬಾವಿಯ ಸುತ್ತಲೂ ತಡೆಗೋಡೆ ನಿರ್ಮಿಸಲು ಸಾಧ್ಯವಿದೆ ಎಂದಿದ್ದರು. ಈವರೆಗೂ ಆ ಕಾರ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next