Advertisement

ಪಾರಂಪರಿಕ ನಗರಿಗೆ ಪ್ರವಾಸಿಗರ ಲಗ್ಗೆ, ದೀಪಾವಳಿ ಹಬ್ಬದ ರಜಾ ಮೋಜು

04:57 PM Oct 26, 2022 | Team Udayavani |

ಬೀದರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪಾರಂಪರಿಕ ಜಿಲ್ಲೆ ಬೀದರಗೆ ಪ್ರವಾಸಿಗರು ಬರುವ ಸಂಖ್ಯೆ ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಸದ್ಯ ಬೆಳಕಿನ ಹಬ್ಬ ದೀಪಾವಳಿಯ ಸಾಲು ಸಾಲು ರಜೆ ಬಂದಿರುವುದರಿಂದ ಸ್ಮಾರಕಗಳ ಖಣಿ ಖ್ಯಾತಿಯ ಬೀದರನಲ್ಲಿ ಪ್ರವಾಸಿಗರ ದಂಡು ದುಪ್ಪಟ್ಟಾಗಿದೆ. ಐತಿಹಾಸಿಕ ತಾಣಗಳಲ್ಲಿ ಸುತ್ತಾಡಿ ರಜೆಯ ಮಜಾ ಪಡೆಯುತ್ತಿದ್ದಾರೆ. ನಾಲ್ಕನೇ ಶನಿವಾರ, ರವಿವಾರ ಜತೆಗೆ ದೀಪಾವಳಿ ಪ್ರಯುಕ್ತ ಮೂರು ದಿನಗಳ ರಜೆ ಸಿಕ್ಕಿವೆ. ಹಾಗಾಗಿ ನೌಕರರು ತಮ್ಮ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದಾರೆ. ಇದರಿಂದ ಬೀದರ ನಗರ ಮಾತ್ರವಲ್ಲ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳು ಕುತ್ತಿವೆ. ದೇಗುಲಗಳಲ್ಲಿ ಹಬ್ಬದ ಸಂಭ್ರಮವಾದರೆ, ಐತಿಹಾಸಿಕ ತಾಣಗಳಲ್ಲಿ ನಿಸರ್ಗದ ಸಂಭ್ರಮವಾಗಿದ್ದು, ಹಾಗಾಗಿ ಜನಜಂಗುಳಿ ಸೇರಿದೆ. ಈ ಬಾರಿ ಹೊರ ರಾಜ್ಯದ ಪ್ರವಾಸಿಗರು ಅಧಿಕವಾಗಿ ಭೇಟಿ ನೀಡಿರುವುದು ವಿಶೇಷವಾಗಿತ್ತು.

Advertisement

ತಾಣಗಳಿಗೆ ಪ್ರವಾಸಿಗರ ಲಗ್ಗೆ: ನಗರದ ಐತಿಹಾಸಿಕ ಬಹುಮನಿ ಕೋಟೆ, ಗವಾನ ಮದರಸಾ, ಗುರುನಾನಕ ದೇವಸ್ಥಾನ, ನರಸಿಂಹ ಝರಣಾ, ಅಷ್ಟೂರಿನ ಗುಂಬಜ್‌ ಗಳು, ಬಸವಕಲ್ಯಾಣದ ಬಸವಾದಿ ಶರಣರ ಸ್ಮಾರಕಗಳು, ನಾರಾಯಣಪುರ ಮಂದಿರ, ಉಮಾಪುರ ಮತ್ತು ಜಲಸಂಗಿ ದೇವಸ್ಥಾನ ಸೇರಿದಂತೆ ಅನೇಕ ಸ್ಮಾರಕಗಳನ್ನು ಹೊಂದಿರುವ ಬೀದರ ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಒತ್ತಡದ ಬದುಕಿನಿಂದ ಬೇಸತ್ತವರು ತಮ್ಮ ಕುಟುಂಬ ಸಮೇತ ಕಣ್ಮನ ಸೆಳೆಯುವ ತಾಣಗಳನ್ನು ವೀಕ್ಷಿಸಿ ಆನಂದಿಸುತ್ತಿದ್ದಾರೆ.

ಬೀದರನ ಪ್ರಮುಖ ತಾಣ ಬೀದರ ಕೋಟೆಗೆ ಸಾಮಾನ್ಯ ದಿನಗಳಲ್ಲಿ 600ರಿಂದ 800ರವರೆಗೆ ಪ್ರವಾಸಿ ಗರು ಬರುತ್ತಿದ್ದರು. ಆದರೆ, ಸತತ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ದಿನಕ್ಕೆ 2ರಿಂದ 2.5 ಸಾವಿರದವರೆ ಏರಿಕೆಯಾಗಿತ್ತು. ಇನ್ನೂ ದಸರಾ ರಜೆ ಸಂದರ್ಭದಲ್ಲೂ ಪ್ರವಾಸಿಗರ ಸಂಖ್ಯೆ ಅಧಿಕವೇ ಆಗಿತ್ತು. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಸಂಖ್ಯೆ ಅತ್ಯ ಧಿಕ ಎನ್ನಬಹುದು. ಬಸವಕಲ್ಯಾಣ ಹೊರತುಪಡಿ ಸಿದರೆ ಉಳಿದ ತಾಣಗಳೆಲ್ಲವೂ ಒಂದಕ್ಕೊಂದು ಸಮೀಪದಲ್ಲಿಯೇ ಇರುವುದು ಯಾತ್ರಿಗಳಿಗೆ ಹೆಚ್ಚು ಅನುಕೂಲವಾಗಿದೆ.

ಐತಿಹಾಸಿಕ ಕೋಟೆ: ಪಾರಂಪರಿಕ ಬಹುಮನಿ ಕೋಟೆ, ಜಲಸಂಗಿ, ನಾರಾಯಣಪುರ ದೇವಸ್ಥಾನಗಳಿಗೆ ರಜೆಯ ಪ್ರತಿ ದಿನ ಸಾವಿರಾರು ಪ್ರಯಾಣಿಕರು ಬಂದು ದಶ್ಯ ವೈಭವವನ್ನು ಕಣ್ತುಂಬಿಸಿಕೊಂಡರು. ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ ಮತ್ತು ಪಂಜಾಬ್‌ ಮತ್ತಿತರ ಹೊರ ರಾಜ್ಯದ ಯಾತ್ರಿಗಳು ಐತಿಹಾಸಿಕ ಕೋಟೆಯಲ್ಲಿನ ವಿವಿಧ ಸ್ಥಳ ಮತ್ತು ಸ್ಮಾರಕಗಳನ್ನು ವೀಕ್ಷಿಸಿದರು. ಗೈಡ್‌ಗಳ ಕೊರತೆ ಜನರಲ್ಲಿ ನಿರಾಸೆಯನ್ನುಂಟು ಮಾಡಿತು. ವಸತಿ ಗೃಹ, ಹೊಟೇಲ್‌ಗ‌ಳು ತುಂಬಿರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next