Advertisement

Historic Sengol;ನೂತನ ಸಂಸತ್‌ ಭವನದಲ್ಲಿ ರಾಜದಂಡ ಸ್ಥಾಪನೆ… ಸೆಂಗೋಲ್ ಹಿಂದಿನ ಇತಿಹಾಸವೇನು?

05:00 PM May 24, 2023 | Team Udayavani |

ಪ್ರಧಾನಿ ನರೇಂದ್ರ ಮೋದಿ ಅವರು ಮೇ 28(ಭಾನುವಾರ)ರಂದು ನೂತನ ಸಂಸತ್‌ ಭವನವನ್ನು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಅವರು ಸ್ಪೀಕರ್‌ ಸ್ಥಾನದ ಬಳಿ ಐತಿಹಾಸಿಕ ಚಿನ್ನದ ರಾಜದಂಡ (ಸೆಂಗೋಲ್)‌ ಅನ್ನು ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಶಾಂತಿ ಕದಡಿದರೆ ಬಜರಂಗದಳ, ಆರ್‌ಎಸ್‌ಎಸ್‌ ನಿಷೇಧ: ಪ್ರಿಯಾಂಕ್‌ ಖರ್ಗೆ

ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಿದಕ್ಕೆ ಪ್ರತೀಕವಾಗಿ ಈ ಚಿನ್ನದ ರಾಜದಂಡವನ್ನು ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ಸಚಿವ ಶಾ ಹೇಳಿದರು.

ಈ ರಾಜದಂಡವನ್ನು “ಸೆಂಗೋಲ್”‌ ಎಂದು ಕರೆಯುತ್ತಾರೆ. ಇದು ತಮಿಳು ಪದ ಸೆಮ್ಮೈನಿಂದ ಬಂದುದಾಗಿದೆ. ಅಂದರೆ ಇದರರ್ಥ ಧರ್ಮಸಮ್ಮತ ಎಂಬುದಾಗಿದೆ. ಸೆಂಗೋಲ್‌ ಸ್ವತಂತ್ರ ಭಾರತದ ಐತಿಹಾಸಿಕ ಸಂಕೇತವಾಗಿದೆ. ಇದು ಬ್ರಿಟಿಷರು ಭಾರತೀಯರಿಗೆ ಅಧಿಕಾರವನ್ನು ಹಸ್ತಾಂತರಿಸಿರುವುದನ್ನು ಪ್ರತಿನಿಧಿಸುತ್ತದೆ.

ರಾಜದಂಡ(ಸೆಂಗೋಲ)ದ ಹಿಂದಿನ ಇತಿಹಾಸವೇನು?

Advertisement

ಬ್ರಿಟಿಷ್‌ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್‌ ಮೌಂಟ್‌ ಬ್ಯಾಟನ್ ನೆಹರು ಅವರ ಜೊತೆ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿಂದಾಗಿ ಸೆಂಗೋಲ್‌ ಇತಿಹಾಸದ ಬಗ್ಗೆ ತಿಳಿಯುವಂತಾಗಿತ್ತು. ಪತ್ರಿಕೆಗಳ ವರದಿಯ ಪ್ರಕಾರ, ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರು ಭಾರತ ಸ್ವತಂತ್ರಗೊಳ್ಳುತ್ತಿರುವ ಈ ಸಮಯದಲ್ಲಿ ಅಧಿಕಾರ ಹಸ್ತಾಂತರದ ಸಂಕೇತದ ಕುರಿತು ಏನು ಮಾಡಬೇಕು ಎಂದು ನೆಹರು ಅವರ ಬಳಿ ಸಲಹೆ ಕೇಳಿದ್ದರು ಎಂದು ವರದಿ ತಿಳಿಸಿದೆ.

ಆ ನಿಟ್ಟಿನಲ್ಲಿ ದೇಶದ ಕೊನೆಯ ಗವರ್ನರ್‌ ಜನರಲ್‌ ಸಿ.ರಾಜಗೋಪಾಲಾಚಾರಿ ಅವರ ಬಳಿ ನೆಹರು ಅವರು ಸಲಹೆ ಕೇಳಿದ್ದರು. ಅದಕ್ಕೆ ರಾಜಾಜಿ ಎಂದೇ ಜನಪ್ರಿಯರಾಗಿದ್ದ ರಾಜಗೋಪಾಲಾಚಾರಿಯವರು “ತಮಿಳು ಸಂಪ್ರದಾಯದಲ್ಲಿ ಪ್ರಧಾನ ಅರ್ಚಕರು ಹೊಸದಾಗಿ ಅಧಿಕಾರಕ್ಕೇರಿದ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ಕುರಿತು ತಿಳಿಸಿದ್ದರಂತೆ.

ವರದಿಯ ಪ್ರಕಾರ, ಚೋಳರ ಕಾಲದಲ್ಲಿ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತಿತ್ತು. ಆ ನಿಟ್ಟಿನಲ್ಲಿ ಭಾರತ ಸ್ವಾತಂತ್ರ್ಯ ಪಡೆದುದಕ್ಕೆ ಸಂಕೇತವಾಗಿ ಸೆಂಗೋಲ್‌ (ರಾಜದಂಡ) ಅನ್ನು ಹಸ್ತಾಂತರಿಸುವಂತೆ ರಾಜಾಜಿ ನೆಹರುಗೆ ಸಲಹೆ ನೀಡಿರುವುದಾಗಿ ವಿವರಿಸಿದೆ.

ಸ್ವತಂತ್ರ ಭಾರತಕ್ಕೆ ಬ್ರಿಟಿಷರು ಅಧಿಕಾರವನ್ನು ಹಸ್ತಾಂತರಿಸುವುದಕ್ಕೆ ಪ್ರತೀಕವಾಗಿ ರಾಜದಂಡವನ್ನು ತರುವ ಮಹತ್ವದ ಹೊಣೆಗಾರಿಕೆಯನ್ನು ರಾಜಾಜಿಯವರಿಗೆ ವಹಿಸಲಾಗಿತ್ತು. ಅದರಂತೆ ರಾಜಾಜಿಯವರು ತಮಿಳುನಾಡಿನ ಪ್ರಮುಖ ತಿರುವಾಡುಥುರೈ ಅಧೀನಂ ಮಠವನ್ನು ಸಂಪರ್ಕಿಸಿ, ಚರ್ಚೆ ನಡೆಸಿದ್ದರು. ಮಠದ ಸ್ವಾಮೀಜಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್‌ ನೀಡಲು ಒಪ್ಪಿಗೆ ಸೂಚಿಸಿದ್ದರು. ಮದ್ರಾಸ್‌ ಪ್ರಾಂತ್ಯದ ಯುಮ್ಮಿಡಿ ಬಂಗಾರು ಚೆಟ್ಟಿ ಎಂಬ ಅಕ್ಕಸಾಲಿಗ ಈ ಸೆಂಗೋಲ್‌ ಅನ್ನು ತಯಾರಿಸಿದ್ದರು. ಇದು ಐದು ಅಡಿ ಉದ್ದವಾಗಿದ್ದು, ನ್ಯಾಯದ ಸಂಕೇತವಾಗಿ ರಾಜದಂಡದ ಟಾಪ್‌ ನಲ್ಲಿ ನಂದಿಯನ್ನು ಕೆತ್ತಲಾಗಿದೆ.

ರಾಜದಂಡ ಹಸ್ತಾಂತರ:

ವರದಿಯ ಪ್ರಕಾರ, ಮಠದ ಹಿರಿಯ ಪುರೋಹಿತರು ಮೊದಲು ಈ ರಾಜದಂಡವನ್ನು ಮೌಂಟ್‌ ಬ್ಯಾಟನ್‌ ಗೆ ಹಸ್ತಾಂತರಿಸಿ, ನಂತರ ವಾಪಸ್‌ ಪಡೆದು ಅದಕ್ಕೆ ಗಂಗಾಜಲವನ್ನು ಪ್ರೋಕ್ಷಿಸಿದ್ದರು. ನಿಯೋಜಿತ ಪ್ರಧಾನಿ ನೆಹರು ಅವರನ್ನು ಮೆರವಣಿಗೆಯಲ್ಲಿ ಕರೆತಂದು ರಾಜದಂಡವನ್ನು ಹಸ್ತಾಂತರಿಸಲಾಗಿತ್ತು.(1947ರ ಅಗಸ್ಟ್‌ 14ರ ಮಧ್ಯರಾತ್ರಿ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರು ಅವರಿಗೆ ಬ್ರಿಟಿಷರು ಅಧಿಕಾರ ಹಸ್ತಾಂತರಿಸಿದ ಪ್ರತೀಕವಾಗಿ ಸೆಂಗೋಲ್‌ ಅನ್ನು ನೀಡಿದ್ದರು. ನಂತರ ರಾಜದಂಡವನ್ನು ಅಲಹಾಬಾದ್‌ ಮ್ಯೂಸಿಯಮ್‌ ನಲ್ಲಿ ಇಡಲಾಗಿತ್ತು).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next