Advertisement

Chandrayaan-3 Mission: ಇದೊಂದು ಐತಿಹಾಸಿಕ ಕ್ಷಣ ಎಂದು ಶ್ಲಾಘಿಸಿದ ಪಾಕ್ ಸಚಿವರು

10:22 AM Aug 23, 2023 | Team Udayavani |

ಇಸ್ಲಾಮಾಬಾದ್: ಭಾರತದ ಚಂದ್ರಯಾನ-3 ಲ್ಯಾಂಡಿಂಗ್ ಬಗ್ಗೆ ದೇಶಾದ್ಯಂತ ಜನರು ಮಾತ್ರವಲ್ಲದೆ, ನೆರೆಯ ರಾಷ್ಟ್ರ ಪಾಕಿಸ್ತಾನದ ಜನರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.

Advertisement

ಇದಕ್ಕೆ ಸ್ಪಷ್ಟ ಉದಾಹರಣೆ ಮಂಗಳವಾರ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಭಾರತದ ಮೂರನೇ ಚಂದ್ರಯಾನ-3 ಅನ್ನು ಅಭಿನಂದಿಸಿರುವುದು. ಮನುಕುಲಕ್ಕೆ ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಪಾಕಿಸ್ತಾನದ ಮಾಜಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅನ್ನು ಹಲವು ಬಾರಿ ಗೇಲಿ ಮಾಡಿದ್ದಾರೆ. ಇದರ ನಂತರ, ಮಂಗಳವಾರ ಭಾರತವನ್ನು ಅಭಿನಂದಿಸಿದ ಅವರು, ಚಂದ್ರಯಾನ -3 ರ ಲ್ಯಾಂಡಿಂಗ್ ಅನ್ನು ನೇರ ಪ್ರಸಾರ ಮಾಡಲು X (ಟ್ವಿಟ್ಟರ್) ನಲ್ಲಿ ತಮ್ಮ ದೇಶದ ಸರ್ಕಾರವನ್ನು ವಿನಂತಿಸಿದ್ದಾರೆ.

ನೇರಪ್ರಸಾರ ಮಾಡುವ ಕುರಿತು ಚರ್ಚೆ:
ಫವಾದ್ ಹುಸೇನ್ ಚಂದ್ರಯಾನ-3 ಅನ್ನು ಚಂದ್ರನ ಮೇಲೆ ನೇರವಾಗಿ ಇಳಿಸುವುದನ್ನು ಪಾಕ್ ಮಾಧ್ಯಮಗಳಿಗೆ ಟ್ವಿಟರ್ ‘X’ ನಲ್ಲಿ ಸಂಜೆ 6:15 ಕ್ಕೆ ತೋರಿಸುವ ಕುರಿತು ಮಾತನಾಡಿದರು. ಮನುಕುಲಕ್ಕೆ ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಅವರು ವಿಶೇಷವಾಗಿ ಭಾರತದ ವಿಜ್ಞಾನಿಗಳನ್ನು ಹಾಗೂ ಜನರನ್ನು ಅಭಿನಂದಿಸಿದರು. ಇದಕ್ಕೂ ಮುನ್ನ ಫವಾದ್ ಹುಸೇನ್ ಅವರು ಜುಲೈ 14 ರಂದು ಇಸ್ರೋ ಮೂರನೇ ಚಂದ್ರನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಭಾರತದ ಬಾಹ್ಯಾಕಾಶ ಮತ್ತು ವಿಜ್ಞಾನ ಸಮುದಾಯದ ಜನರನ್ನು ಅಭಿನಂದಿಸಿದ್ದಾರೆ.

2019 ರಲ್ಲಿ ಚಂದ್ರಯಾನ-2 ಮಿಷನ್ ವಿಫಲವಾದ ನಂತರ ಫವಾದ್ ಹುಸೇನ್ ಚೌಧರಿ ಇಸ್ರೋವನ್ನು ತೀವ್ರವಾಗಿ ಟ್ರೋಲ್ ಮಾಡಿದರು. ಎರಡನೇ ಚಂದ್ರಯಾನಕ್ಕೆ 900 ಕೋಟಿ ರೂಪಾಯಿ ಖರ್ಚು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ ಅವರು, ಗೊತ್ತಿಲ್ಲದ ಸ್ಥಳದಲ್ಲಿ ಕೆಲಸ ಮಾಡುವುದು ಜಾಣತನವಲ್ಲ ಎಂದು ಹೇಳಿದ್ದರು.

Advertisement

ಇದನ್ನೂ ಓದಿ: Rescue: ಸತತ 15 ಗಂಟೆಗಳ ಕಾರ್ಯಾಚರಣೆ… ಕೇಬಲ್ ಕಾರ್ ನಲ್ಲಿ ಸಿಲುಕಿದ್ದ 8 ಮಂದಿಯ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next