ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿರೇಕೆರೆಯನ್ನು ಮಠಾಧಿಧೀಶರು, ಸಂಘ, ಸಂಸ್ಥೆ, ರೈತರು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೂಳೆತ್ತುವ ಮೂಲಕ ಕೆರೆಯನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿತ್ತು. ಜನಪ್ರತಿನಿ ಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆಯು ಕುಡುಕರ, ಬಯಲು ಶೌಚಾಲಯ ತಾಣವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆ ತುಂಬಿ ಅಪಾಯ ಆಹ್ವಾನಿಸುತ್ತಿದೆ.
ಹಿರೇಕೆರೆ 39 ಎಕರೆ ವಿಸ್ತೀರ್ಣ ಹೊಂದಿದೆ. ಒಂದು ಕಾಲದಲ್ಲಿ ರೈತರ ಜೀವನಾಡಿಯಾಗಿದ್ದ ಹಿರೇಕೆರೆಯಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲಮೇಲ್ಮಟ್ಟದಲ್ಲಿತ್ತು. ಮಳೆ ಉತ್ತಮವಾಗಿರುವುದರಿಂದಕೆರೆಯಲ್ಲಿ ನೀರು ಹೆಚ್ಚು ಸಂಗ್ರಹವಾಗಿದೆ. ಕೆರೆಗೆ ಹೋಗಲು ಹೆದರುವಂತಹ ಪ್ರಸಂಗನಿರ್ಮಾಣವಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಿಲ್ಲ.ಯಾವುದೇ ರೀತಿಯ ನಾಮಫಲಕ ಅಳವಡಿಸಿಲ್ಲ. ತಂತಿ ಬೇಲಿ ಸಹ ಅಳವಡಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಕೆರೆಯ ಸುತ್ತ ದನಕರಗಳು: ಹಿರೇಕೆರೆಯ ದಂಡೆಯ ಮೇಲೆ ಕೋಡಿಕೊಪ್ಪ, ಪಟ್ಟಣದ ಸಾರ್ವಜನಿಕರು ದನ ಕರಗಳನ್ನು ಬಿಟ್ಟಿರುತ್ತಾರೆ. ದನ ಕಾಯುವ ಹುಡುಗರು ಕೆರೆ ಬದುವಿನ ಮೇಲೆ ಕುಳಿತು ಸ್ವಲ್ಪ ಬಾಗಿದರೆಸಾಕು ಕೆರೆಯು ಆಳವಾಗಿರುವುದರಿಂದ ನೀರು ಕೈಗೆ ತಾಗುತ್ತವೆ. ಒಂದು ವೇಳೆ ಆಯತಪ್ಪಿ ಏನಾದರುಬಿದ್ದರೆ ಸಾವು ಖಚಿತವಾಗಿದೆ. ಕೆರೆಯ ಸುತ್ತಲುಸಾಕಷ್ಟು ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದಿವೆ.ಕೆರೆಯ ನೆಲ ಕಾಣವುದಿಲ್ಲ. ಒಂದು ವೇಳೆ ಕಾಲಇಟ್ಟರೆ ಕುಸಿದು ನೀರಿಗೆ ಬೀಳುವಂತಾಗಿದೆ. ಅನೈತಿಕ ಚಟುವಟಿಕೆಗಳಿಗೂ ಅವಕಾಶವಾಗುತ್ತಿರುವುದು ಪರಿಸರಪ್ರಿಯರು, ವಾಯು ವಿಹಾರಕ್ಕೆಹೋಗುವವರಲ್ಲಿ ಆತಂಕ ಉಂಟು ಮಾಡಿದೆ. ಕೆರೆ ದಂಡೆ ಕುಡುಕರ ನೆಚ್ಚಿನ ತಾಣ: ಕೆರೆಯ ದಂಡೆಯ ಮೇಲೆ ಸಂಜೆಯಾದರೆ ಸಾಕು ಅನೈತಿಕ, ಅಕ್ರಮ ಚಟುವಟಿಕೆಗಳಿಂದ ಕುಡಿರುತ್ತದೆ. ಖಾಲಿಯಾದ ಬೀರ್-ಬ್ರಾಂಡಿ ಬಾಟಲ್‌ಗಳು, ಟೆಟ್ರಾ ಪ್ಯಾಕ್‌ಗಳು, ನೀರಿನ ಸ್ಯಾಚೆಟ್‌ಗಳು, ಬಾಟಲಿಗಳು, ಪ್ಲಾಸ್ಟಿಕ್ ಲೋಟಾಗಳು, ಗುಟಖಾ ಚೀಟುಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳೂ, ಊಟ ಮಾಡಿ ಒಗೆದಿರುವ ಪ್ಲಾಸ್ಟಿಕ್ ತಟ್ಟೆಗಳು, ಸಿಗರೇಟ್ ಪಾಕೀಟುಗಳು, ಬೆಂಕಿ ಕಡ್ಡಿ ಪೆಟ್ಟಿಗೆಗಳು ಹಿರೇಕೆರೆಯ ಅಂಗಳದ ತುಂಬ ನೋಡುಗರ ಕಣ್ಣಿಗೆ ರಾಚುವಂತೆ ಬಿದ್ದಿವೆ. ಕೆರೆಯ ದಂಡೆಯ ಮೇಲೆ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಬಾರ್‌ಗಳಲ್ಲಿ ಸಿಗದ ಮೋಜು ಮಸ್ತಿಯನ್ನು ಇಲ್ಲಿ ಯಾರ ಭಯವೂ ಇಲ್ಲದೇ ರಾಜಾರೋಷವಾಗಿ ಮಾಡುತ್ತಿದ್ದಾರೆ.
ಕ್ರಮ ಕೈಗೊಳ್ಳದ ಅಧಿಕಾರಿಗಳು: ಪಟ್ಟಣದ ಹಿರೇಕೆರೆ ದಂಡೆ ಸಂಜೆಯಾಗುತ್ತಲೇ ಕುಡುಕರ ಅಡ್ಡೆಯಾಗಿರುವದನ್ನು ಅಬಕಾರಿ ಹಾಗೂ ಪೊಲೀಸ್ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕುಡುಕರಿಗೆ ಬುದ್ಧಿವಾದ ಹೇಳಿ ಬೇರೆ ಸ್ಥಳಗಳಲ್ಲಿ ನೀವು ನಿಮ್ಮ ಚಟಗಳನ್ನು ಮಾಡಿ ಎಂದು ಹೇಳಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಓಡಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕುಡಿದ ಅಮಲಿನಲ್ಲಿ ಕಾಲು ಜಾರಿ ಕೆರೆ ಬಿದ್ದರೆ ಯಾರು ಹೊಣೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ಹಿರೇಕೆರೆ ಅಭಿವೃದ್ಧಿಗೆ ಕೆರೆಯ ಸುತ್ತಲು ತಡೆಗೋಡೆ, ತಂತಿ ಬೇಲಿ ಹಾಕಲು ಸಣ್ಣ ನೀರಾವರಿ ಇಲಾಖೆಹಾಗೂ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆರೆ ದಂಡೆಯ ಮೇಲೆ ಚಿಕ್ಕ ಮಕ್ಕಳನ್ನುಹಾಗೂ ದನಕರಗಳನ್ನು ಬಿಡುವಾಗ ಎಚ್ಚರಿಕೆ ವಹಿಸಬೇಕು ಎಂದು ಈಗಾಗಲೇ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
-ಮಹೇಶ ನಿಡಶೇಶಿ, ಪಪಂ ಮುಖ್ಯಾಧಿಕಾರಿ
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರ ಜೀವನಾಡಿಯಾಗಿರುವ ಹಿರೇಕೆರೆ ದೇವರ ಕೃಪೆಯಿಂದ ಉತ್ತಮ ಮಳೆಯಾದ ಪರಿಣಾಮ ಕೆರೆ ತುಂಬಿಕೊಂಡಿದೆ. ಇದರಿಂದ ರೈತರ ಕೊಳೆವೆ ಬಾವಿ ಅಂತರ್ಜಲ ಮಟ್ಟ ಹೆಚ್ಚಾಗುವ ಸಾಧ್ಯಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೆಯ ಸುತ್ತಲು ತಂತಿ ಬೇಲಿ ಅಳಡಿಸುವುದಕ್ಕೆಮುಂದಾಗಬೇಕು. ರಾತ್ರಿ ವೇಳೆ ಮದ್ಯ ಪಾನ ಮಾಡುವುದಕ್ಕೆ ಬರುವ ಜನರನ್ನು ಈ ಕೆರೆಗೆ ಬಾರದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ.
– ನಜೀರ ಹದ್ಲಿ, ಕೋಡಿಕೊಪ್ಪ ನಿವಾಸಿ
-ಸಿಕಂದರ ಎಂ. ಆರಿ