Advertisement

ಕ್ಲಿನಿಕ್‌ಗೆಂದು ತೆರಳಿ ನಾಪತ್ತೆಯಾಗಿದ್ದ ಕೋಟ್ನಕಟ್ಟೆಯ ವ್ಯಕ್ತಿ ಶವವಾಗಿ ಪತ್ತೆ

10:13 PM Jun 16, 2022 | Team Udayavani |

ಹೆಬ್ರಿ : ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಕೋಟ್ನಕಟ್ಟೆ ನಿವಾಸಿ ಬಿ. ಪ್ರಕಾಶ್ ಪೈ (67) ಎಂಬವರು ಜೂ.13 ರಂದು ನಾಪತ್ತೆಯಾಗಿದ್ದು ಜೂ.16ರಂದು ಕುಕ್ಕೆಹಳ್ಳಿ ಹಾಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮೃತ ದೇಹದ ಬಳಿ ವಿಷದ ಬಾಟಲಿ ಇದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತದೆ. ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಕ್ಲಿನಿಕ್‌ಗೆ ಚಿಕಿತ್ಸೆಗೆಂದು ತೆರಳಿದವರು ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದರು.

ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಇದನ್ನೂ ಓದಿ :ಧಾರಾಕಾರ ಮಳೆ : ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದೊಳಗೆ ನುಗ್ಗಿದ ನೀರು, ಭಕ್ತರ ಪರದಾಟ 

Advertisement

Udayavani is now on Telegram. Click here to join our channel and stay updated with the latest news.

Next