Advertisement
ಈ ಹಿನ್ನೆಲೆಯಲ್ಲಿ ಸರಕಾರ ವರ್ಷ ಕಳೆಯುತ್ತಿದ್ದಂತೆ ಆಡಳಿತ ಯಂತ್ರಕ್ಕೆ ಚುರುಕು ನೀಡುವುದು ಹಾಗೂ ಶಾಸಕರಿಗೆ ನಿಗಮ ಮಂಡಳಿ ಅಧಿಕಾರ ನೀಡಿ ಅವರ ಮನಸ್ಸಿನ ಬೇಸರವನ್ನೂ ಕಳೆಯುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ದಿಢೀರ್ ನಿರ್ಧಾರ ಪಕ್ಷದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಲು ಕಾರಣವಾಗುವ ಸಾಧ್ಯತೆ ಇದೆ. ವರ್ಷಾಚರಣೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸಲು ಮಾಡಿದ ಪ್ರಯತ್ನದಂತೆ ಕಾಣಿಸುತ್ತಿದೆ. ಅಲ್ಲದೇ ಈ ನೇಮಕ ಸಚಿವ ಸಂಪುಟ ವಿಸ್ತರಣೆಯ ಪೂರ್ವ ಸಿದ್ಧತೆಯ ಸೂಚನೆ ಯಂತೆಯೂ ಕಾಣಿಸುತ್ತದೆ. ಅದೇ ಕಾರಣಕ್ಕೆ ಸಚಿವಾಕಾಂಕ್ಷಿಗಳಾಗಿರುವ ಹಿರಿಯ ಶಾಸಕರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿ ಮುಂದೆ ಎದುರಾಗಬಹು ದಾದ ಅಸಮಾಧಾನ, ಆಕ್ರೋಶ, ಬಂಡಾಯ ಎಲ್ಲವನ್ನೂ ಆರಂಭದಲ್ಲಿಯೇ ತಡೆಯುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ, ಈಗ ಮಾಡಿರುವ ನೇಮಕದಿಂದಲೂ ಕೆಲವು ಶಾಸಕರು ಅಸಮಾಧಾನಗೊಂಡಿದ್ದು, ತಮಗೆ ಯಾವುದೇ ನಿಗಮ- ಮಂಡಳಿ ಅಧ್ಯಕ್ಷ ಹುದ್ದೆ ಬೇಡ ಎಂದು ಬಹಿರಂಗ ವಾಗಿಯೇ ತಿರಸ್ಕರಿಸುತ್ತಿದ್ದಾರೆ. ನಾಲ್ಕು ಶಾಸಕರ ಹೆಸರು ಅಧಿಕೃತ ಆದೇಶಕ್ಕೂ ಮೊದಲೇ ತಡೆ ಹಿಡಿಯಲಾಯಿತು. ಚಿತ್ರದುರ್ಗದ ತಿಪ್ಪಾರೆಡ್ಡಿ, ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ, ಮುದ್ದೇಬಿಹಾಳ್ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಸುರಪುರ ಶಾಸಕ ನರಸಿಂಹ ನಾಯಕ್ (ರಾಜು ಗೌಡ) ಹಾಗೂ ದತ್ತಾತ್ರೆಯ ಪಾಟೀಲ್ ರೇವೂರ್ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಾದೇಶಿಕತೆ, ಜಾತಿ, ಜಿಲ್ಲಾ ಪ್ರಾತಿನಿಧ್ಯದ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
Advertisement
ನಿಗಮ ಮಂಡಳಿ ನೇಮಕ ಎಚ್ಚರಿಕೆ ಹೆಜ್ಜೆ
08:45 AM Jul 28, 2020 | mahesh |
Advertisement
Udayavani is now on Telegram. Click here to join our channel and stay updated with the latest news.