Advertisement
20 ಅಡಿ ಹೂಳು ಕೆರೆಯು 25ರಿಂದ 30 ಅಡಿಗಳಷ್ಟು ಆಳ ಹೊಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದು ಇದೀಗ ಕೇವಲ 5 ಅಡಿಗಳಷ್ಟು ಮಾತ್ರ ಆಳ ಕಾಣುತ್ತಿದ್ದು ಉಳಿದ 20 ಅಡಿಗಳಷ್ಟು ಹೂಳಿನಿಂದ ತುಂಬಿ ಹೋಗಿದೆ. ಇದರಿಂದ ಕೆರೆಯಲ್ಲಿ ನೀರು ಹಿಡಿಯದಂತಾಗಿದ್ದು, ಕೃಷಿ, ನೀರಾವರಿ ಕೆಲಸಕ್ಕೆ ಬಾರದಂತಾಗಿದೆ.
ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದಲ್ಲಿ ಹಿರ್ಗಾನ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಪಂಚಾಯತು ವ್ಯಾಪ್ತಿಯಲ್ಲಿ ಹೊಸದಾಗಿ ತೆರೆದ ಬಾವಿ, ಕೊಳವೆ ಬಾವಿ ನಿರ್ಮಾಣ ಮಾಡುವ ಬದಲಿಗೆ ಜಲಮೂಲವಿರುವ ಪ್ರಾಚೀನ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪಂಚಾಯತು ವ್ಯಾಪ್ತಿಗೆ ಬೇಕಾದಷ್ಟು ನೀರು ದೊರೆತು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
Related Articles
ಹೂಳೆತ್ತಿ ಕೆರೆ ಅಭಿವೃದ್ಧಿಪಡಿಸಲು ಬಹಳಷ್ಟು ಅನುದಾನ ಬೇಕಾಗಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರ ವಿಶೇಷ ಅನುದಾನ ನೀಡಿದಲ್ಲಿ ಕೆರೆ ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರ ಹಾಗೂ ಸಂಸದರ ಗಮನಸೆಳೆಯಲಾಗುವುದು.
– ಸಂತೋಷ್ ಕುಮಾರ್ ಶೆಟ್ಟಿ, ಹಿರ್ಗಾನ ಗ್ರಾ.ಪಂ. ಅಧ್ಯಕ್ಷರು
Advertisement
ಪಾಳುಬಿದ್ದ ಕೃಷಿಭೂಮಿಹರಿಯಪ್ಪ ಕೆರೆಯ ನೀರು ಕಾಲುವೆ ಮೂಲಕ ಕೃಷಿ ಭೂಮಿಗೆ ಹರಿದು ಸ್ಥಳೀಯರು ಭತ್ತದ ಬೆಳೆ ಬೆಳೆಯುತ್ತಿದ್ದರು. ಆದರೆ ಕೆರೆಯ ನಿರ್ವಹಣೆಯಿಲ್ಲದೆ ನೀರಿನಮಟ್ಟ ಕುಸಿದು ಕೃಷಿಭೂಮಿ ಪಾಳುಬಿದ್ದಿದೆ. ಕೆರೆ ಅಭಿವೃದ್ಧಿಗೊಂಡಲ್ಲಿ ಬೇಸಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗವಹುದು.
– ತಾರಾನಾಥ ಶೆಟ್ಟಿ, ಕೃಷಿಕರು – ಜಗದೀಶ್ ರಾವ್ ಅಜೆಕಾರು