Advertisement
ನಗರದ ಪಟ್ಟದೇವರ ಪ್ರಸಾದ ನಿಲಯದಲ್ಲಿ ಶ್ರೀ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ನಿವೇದಿತಾ ಹೂಗಾರ ಸಾಂಸ್ಕೃತಿಕ, ಶೈಕ್ಷಣಿಕ, ವಿಕಸನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 63ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಅನೇಕ ದಶಕಗಳಿಂದ ಈ ಭಾಗದಲ್ಲಿ ಡಾ|ಚನ್ನಬಸವ ಪಟ್ಟದ್ದೇವರು ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದವರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಗಡಿಯಲ್ಲಿ ಕನ್ನಡ ಉಳಿಸುವಲ್ಲಿ ಶ್ರೀಮಠದ ಪಾಲು ಹೆಚ್ಚಿದೆ ಎಂದರು.
ಡಾ| ಚನ್ನಬಸವ ಪಟ್ಟದ್ದೇವರು ಅನೇಕ ಹಳೆ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕೆ ಇಂದು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಸಾಹಿತಿ ಶಾಂತರಸರು ಪ್ರಸಾದ ನಿಲಯದ ವಿದ್ಯಾರ್ಥಿಗಳಾಗಿ ಮುಂದೆ 72ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಶ್ರೀಗಳ ಕೃಪೆಯೆ. ಇಂದು ಬಸವಕಲ್ಯಾಣದ ಅನುಭವ ಮಂಟಪವನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡುವ ಶ್ರಮ ಅವರದಾಗಿದೆ ಎಂದರು.
Related Articles
Advertisement
ಪ್ರೊ| ಚಂದ್ರಕಾಂತ ಬಿರಾದಾರ ಮಾತನಾಡಿ, ಚನ್ನಬಸವೇಶ್ವರ ಗುರುಕುಲದ ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಕಾಶ ದೇಶಮುಖ, ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ನಾಗಯ್ನಾ ಸ್ವಾಮಿ, ಜಗನ್ನಾಥ ಚಿಟಮೆ, ಕಲ್ಪನಾ ಸಾವಲೆ, ಶಾಮ ಡೊಂಗರಗಿ, ಸಂಗಮೇಶ ಜ್ಯಾಂತೆ, ನವಲಿಂಗ ಪಾಟೀಲ, ಪ್ರಕಾಶ ಕೋರೆ, ಶ್ರೀಕಾಂತ ಸ್ವಾಮಿ, ಶ್ರೀಮಂತ ಸಪಾಟೆ, ಎಸ್.ಎಂ. ಜನವಾಡಕರ್, ದೇಶಾಂಶ ಹುಡಗಿ, ಚಂದ್ರಕಾಂತ ಬಿರಾದಾರ, ಎಂ.ಪಿ. ಮುದಾಳೆ, ಡಾ| ಧನಲಕ್ಷ್ಮೀ ಪಾಟೀಲ, ಪಾರ್ವತಿ ಸೋನಾರೆ, ಮಲ್ಲಿಕಾರ್ಜುನ ಮರಖಲೆ, ಡಾ| ಶಾಂತಕುಮಾರ ಸಂಗೋಳಗೆ, ಓಂಕಾರ ಪಾಟೀಲ, ವೇದಾವತಿ, ಮಹೇಶ ಗೋರನಾಳಕರ್, ಅಂಬರೀಶ ಮಲ್ಲೇಶಿ, ಸಂತೋಷ ಹಡಪದ, ಸಂತೋಷ ಪಾಟೀಲ ಸುಂದಾಳ, ಸಂಗಪ್ಪಾ ಸೋಲಪುರೆ, ಉಪಸ್ಥಿತರಿದ್ದರು.