Advertisement

ಗ್ರಾಮೀಣ ಕಲೆ ಉಳಿವಿಗೆ ಸರ್ಕಾರ ಆದ್ಯತೆ ನೀಡಲಿ: ಹಿರೇಮಠ

07:07 PM Feb 08, 2021 | Team Udayavani |

ಮುಂಡರಗಿ: ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ನಡೆಯುತ್ತಿರುವುದರಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ. ಆದರೆ ಯಾಂತ್ರಿಕ ಯುಗದಲ್ಲಿ ನಾಟಕಗಳು ಕಣ್ಮರೆಯಾಗುತ್ತಿದ್ದು, ಗ್ರಾಮೀಣ ಕಲೆಗಳ ಉಳಿವಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಹೇಳಿದರು.

Advertisement

ಡಂಬಳ ಗ್ರಾಮದ ಶ್ರೀ ಮರುಳಸಿದ್ದೇಶ್ವರ ನ್ಯಾಟ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಹಾಗೂ ಮಾಳಿಂಗರಾಯ ದೇವಸ್ಥಾನ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಸಂಪೂರ್ಣ ರಾಮಾಯಣ’ ಬಯಲಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವಕರ ಮೇಲೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವ ಬೀರಿ ಕಲೆ, ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

 ಇದನ್ನೂ ಓದಿ :ಕವನಗಳು ಓದುವ ಆಸಕ್ತಿ ಹೆಚ್ಚಿಸಲಿ : ಶ್ರೀ

ಈ ಸಂದರ್ಭದಲ್ಲಿ ಗುರುಶಾಂತಯ್ಯ ಗುರುವಿನ, ಗೋಣಿಬಸಪ್ಪ ಕೊರ್ಲಹಳ್ಳಿ, ಗವಿಸಿದ್ದಪ್ಪ ಮಠದ, ಗ್ರಾಪಂ ಅಧ್ಯಕ್ಷೆ ಬಸಮ್ಮ ಹಾದಿಮನಿ, ಉಪಾಧ್ಯಕ್ಷೆ ಯಲ್ಲಮ್ಮ ಬಂಡಿ, ಮರಿತೆಮ್ಮಪ್ಪ ಆದಮ್ಮನವರ, ಬಸವರಡ್ಡಿ ಬಂಡಿಹಾಳ, ಗ್ರಾಪಂ ಸದಸ್ಯ ಕುಮಾರ ಮಾನೆ, ಹುಸೇನ್‌ ಮೂಲಿಮನಿ, ಬಸಪ್ಪ ಮೂಕಬಸಪ್ಪನವರ, ಹುಲಗಪ್ಪ ಜೊಂಡಿ, ವಾಸಪ್ಪ ಕಾಶಭೋವಿ, ಲೆಂಕಪ್ಪ ಬಂಡಿ, ರಂಗಪ್ಪ ಜೊಂಡಿ, ಹನುಮಪ್ಪ ಬಿಡನಾಳ, ಸಿದ್ದಪ್ಪ ಮಠದ, ಮಂಜುನಾಥ ಬಿಸನಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next