Advertisement

ಹಿರೇಕೆರೂರ: ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ

06:25 PM Jan 03, 2024 | Team Udayavani |

ಉದಯವಾಣಿ ಸಮಾಚಾರ
ಹಿರೇಕೆರೂರ: ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಆಹಾರದ ಹೊಸ ಮೆನುವಿ ನಂತೆ ಆಹಾರ ವಿತರಣೆಗೆ ಶಾಸಕ ಯು.ಬಿ.ಬಣಕಾರ ಚಾಲನೆ ನೀಡಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ನಲ್ಲಿ ಆಹಾರ ಸೇವಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್‌ ಗಳನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿತ್ತು. ಈಗ ಇಂದಿರಾ ಕ್ಯಾಂಟೀನ್‌ ನಲ್ಲಿ ತಿಂಡಿ ಹಾಗೂ ಊಟದ ಮೆನು ಬದಲಾವಣೆ ಮಾಡಿದ್ದು, ಹೋಟೆಲ್‌ ಮೆನುವನ್ನೂ ಮೀರಿಸುವಂತಿದೆ. ಕಡಿಮೆ ಹಣಕ್ಕೆ ಗುಣಮಟ್ಟದ ಸ್ವಾದಿಷ್ಟಕರ ಆಹಾರ ಲಭ್ಯವಾಗಲಿದೆ. ಕೇವಲ ಅನ್ನ, ಸಾಂಬಾರ್‌, ಊಟಕ್ಕೆ ಮಾತ್ರ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್‌ನ ಆಹಾರ ಪೂರೈಕೆಯಲ್ಲಿ ಈಗ ಬದಲಾವಣೆ ಆಗಲಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಬಂದ ಕೂಡಲೇ ಆಹಾರ ಮೆನು ಬದಲಾವಣೆ ಮಾಡಲಾಗಿದ್ದು, ಇಂದಿರಾ ಕ್ಯಾಂಟೀನ್‌ ನಲ್ಲಿ ಹೋಟೆಲ್‌ ತರಹ ಮೆನು ಕೂಡ ಸಿದ್ಧವಾಗಿದೆ. ಇಂದಿರಾ ಕ್ಯಾಂಟೀನ್‌ ನಲ್ಲಿ ಪ್ರಾದೇಶಿಕ ವಿಭಾಗವಾರು ಎಲ್ಲ ಜನರಿಗೂ ಆಹಾರ ಲಭ್ಯವಾಗುವಂತೆ ಮೆನು ಸಿದ್ಧಪಡಿಸಲಾಗಿದೆ ಎಂದರು.

ಪಪಂ ಸದಸ್ಯರಾದ ಸುಧಾ ಚಿಂದಿ, ಕವಿತಾ ಹಾರ್ನಳ್ಳಿ, ಸನಾವುಲ್ಲಾ ಮಕಾನಾರ್‌, ಪಪಂ ಮುಖ್ಯಾಧಿಕಾರಿ ಕೋಡಿ ಭೀಮ
ರಾಯ್‌ ಸೇರಿದಂತೆ ಇತರರಿದ್ದರು.

ಕ್ಯಾಂಟೀನ್‌ ಮೆನು: ಭಾನುವಾರ ಬೆಳಗಿನ ಉಪಾಹಾರ ಇಡ್ಲಿ-ಚಟ್ನಿ, ಕೇಸರಿಬಾತ್‌, ಖಾರಾ ಬಾತ್‌, ಮಧ್ಯಾಹ್ನ ಊಟಕ್ಕೆ ಅನ್ನ
ಅಲಸಂದಿ ಕಾಳು ಸಾಂಬಾರ್‌ ಹಾಗೂ ಕೀರು, ರಾತ್ರಿ ಊಟಕ್ಕೆ ಅನ್ನ ಮೊಳಕೆಕಾಳು ಸಾಂಬಾರ್‌ ಹಾಗೂ ಜೋಳದ ರೊಟ್ಟಿ,
ಸೊಪ್ಪಿನ ಪಲ್ಯ,

Advertisement

ಸೋಮವಾರ ಬೆಳಗಿನ ಉಪಾಹಾರ ಇಡ್ಲಿ-ಚಟ್ನಿ, ಮಂಡಕ್ಕಿ, ಬಜ್ಜಿ, ಮಧ್ಯಾಹ್ನ ಊಟಕ್ಕೆ ಅನ್ನ, ಮೂಲಂಗಿ
ಸಾಂಬಾರ್‌ ಹಾಗೂ ಮೊಸರನ್ನ, ರಾತ್ರಿ ಊಟಕ್ಕೆ ಅನ್ನ ಹಿರೇಕಾಯಿ ಸಾಂಬಾರ್‌, ಮೊಸರನ್ನ, ಚಪಾತಿ- ಸಾಗು.

ಮಂಗಳವಾರ ಬೆಳಗಿನ ಉಪಾಹಾರ ಇಡ್ಲಿ-ಸಾಂಬಾರ್‌, ಖಾರಾ ಬಾತ್‌-ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ, ಬದನೆಕಾಯಿ
ಸಾಂಬರ್‌ ಹಾಗೂ ರಾಗಿ ಅಂಬಲಿ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪು ಪಲ್ಯ, ರಾಗಿ ಅಂಬಲಿ, ಅನ್ನ ಕುಂಬಳಕಾಯಿ
ಸಾಂಬಾರ್‌ ಹಾಗೂ ರಾಗಿ ಅಂಬಲಿ, ಚಪಾತಿ, ಸಾಗು.

ಬುಧವಾರ ಬೆಳಗಿನ ಉಪಾಹಾರ ಇಡ್ಲಿ-ಕರಿಬೇವು ಚಟ್ನಿ, ಅವಲಕ್ಕಿ ಚಟ್ನಿ, ಮಧ್ಯಾಹ್ನ ಊಟ ಅನ್ನ, ಬೀನ್ಸ್‌ ಸಾಂಬಾರ್‌ ಹಾಗೂ ಮೊಸರನ್ನ, ರಾತ್ರಿ ಊಟಕ್ಕೆ ಚಪಾತಿ, ಸಾಗು ಹಾಗೂ ಮೊಸರನ್ನ, ಅನ್ನ, ಮೂಲಂಗಿ ಸಾಂಬಾರ್‌ ಹಾಗೂ ಚಪಾತಿ ಸಾಗು.

ಗುರುವಾರ ಬೆಳಗಿನ ಉಪಾಹಾರ ಇಡ್ಲಿ ಸಾಂಬಾರ್‌, ವೆಜ್‌ ಪಲಾವ್‌ ಚಟ್ನಿ, ಮಧ್ಯಾಹ್ನ ಅನ್ನ ಮೊಳಕೆಕಾಳ ಸಾಂಬಾರ್‌ ಹಾಗೂ ಕೀರು, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪು ಪಲ್ಯ, ಕೀರು, ಅನ್ನ ಬದನೆಕಾಯಿ ಪಲ್ಯ, ಜೋಳದ ರೊಟ್ಟಿ, ಸೊಪ್ಪು ಪಲ್ಯ.

ಶುಕ್ರವಾರ ಬೆಳಗಿನ ಉಪಾಹಾರ ಇಡ್ಲಿ ಸಾಂಬಾರ್‌, ಚಿತ್ರಾನ್ನ ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಹಿರೇಕಾರಿ ಸಾಂಬಾರ್‌
ಹಾಗೂ ರಾಗಿ ಅಂಬಲಿ, ಚಪಾತಿ ಸಾಗು  ಹಾಗೂ ರಾಗಿ ಅಂಬಲಿ, ಅನ್ನ ಅಲಸಂದಿ ಕಾಳು ಸಾಂಬಾರ್‌ ಹಾಗೂ ಚಪಾತಿ ಸಾಗು.

ಶನಿವಾರ ಬೆಳಗಿನ ಉಪಾಹಾರ  ಇಡ್ಲಿ ಸಾಂಬಾರ್‌, ಆಲೂ ಬಾತ್‌ ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಕುಂಬಳಕಾಯಿ ಸಾಂಬಾರ್‌ ಹಾಗೂ ಕೀರು, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪು ಪಲ್ಯ, ಕೀರು, ಅನ್ನ ನುಗ್ಗೆಕಾಯಿ ಸಾಂಬಾರ್‌ ಹಾಗೂ ಜೋಳದ ರೊಟ್ಟಿ ಸೊಪ್ಪು ಪಲ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಸವಿಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next