Advertisement
ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂಸೊಸೈಟಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕ ಜಿ.ಬಿ.ಹರೀಶ್ ಅವರು ಕನ್ನಡಕ್ಕೆ ಅನುವಾದಿಸಿರುವ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ “ಹಿಂದುತ್ವ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಒಂದು ದೇಶವನ್ನು ನಾಶಪಡಿಸಬೇಕಾದರೆ ಆ ದೇಶದ ಬೆನ್ನೆಲುಬಾಗಿರುವ ವಿಚಾರವನ್ನು ಮೊದಲು ನಾಶಪಡಿಸಬೇಕು. ಬಹುತೇಕ ಪಾಶ್ಚಾತ್ಯರು ಇದನ್ನೇ ಮಾಡಿದ್ದು. ನಮ್ಮವರು ಕೂಡ ಅಂತಹವರೊಂದಿಗೆ ಕೈಜೋಡಿಸಿದರು. ಆರ್ಯರು ಮಧ್ಯ ಏಷ್ಯಾದಿಂದ ಬಂದರು. ದ್ರಾವಿಡರನ್ನು ಹೊರಗಟ್ಟಿ ಪ್ರಭುತ್ವ ಮೆರೆದರು ಎಂಬ ಕಾಕಣ್ಣ- ಗುಬ್ಬಣ್ಣ ಕತೆ ಹೇಳಿದರೇ ಹೊರತು ನಮ್ಮ ಧರ್ಮ, ಸಂಸ್ಕೃತಿ, ಬದುಕು, ಪರಂಪರೆ, ಇತಿಹಾಸದ ಬಗ್ಗೆ ಹೇಳಲೇ ಇಲ್ಲ. ನಾವು ಎಲ್ಲಿಂದಲೂ ಬಂದವರಲ್ಲ. ಭಾರತೀಯ ಹಿಂದೂ ಸಂಸ್ಕೃತಿಯ ಮಣ್ಣಿನಲ್ಲಿ ಹುಟ್ಟಿ ಬಂದವರು ನಾವು. ಅಲೆಮಾರಿ ಸಂಸ್ಕೃತಿ ಅಲ್ಲವೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಹಿಂದುತ್ವ ನಮ್ಮ ಬದುಕು. ನಮ್ಮ ಉಸಿರು. ನಮ್ಮ ಚಿಂತನೆ, ಆರಾಧನೆಯ ಕೇಂದ್ರ. ಇಂದಿನ ವೈಚಾರಿಕ ಮಂಥನದ ಸಂದರ್ಭದಲ್ಲಿ ಈ ರೀತಿಯ ಕೃತಿ ಹೊರತಂದು ವೈಚಾರಿಕ ಮಂಥನಕ್ಕೆ ಮತ್ತೂಮ್ಮೆ ಎಡೆ ಮಾಡಿಕೊಟ್ಟಿರುವುದು ಶ್ಲಾಘನೀಯ, ಅಭಿನಂದನೀಯ. ಹಿಂದುತ್ವವನ್ನು ಅರ್ಥ ಮಾಡಿಸಬೇಕಾದ ವಿಚಾರ ಈ ದೇಶದಲ್ಲಿ ಬರಬಾರದು ಎಂದು ಹೇಳಿದರು.
ಹಿರಿಯ ಸಾಹಿತಿ ಎಂ.ಎನ್.ವ್ಯಾಸರಾವ್, ಸಾವರ್ಕರ್ ಅವರು ತಪಸ್ಸಿನ ರೀತಿಯಲ್ಲಿ ರಚಿಸಿರುವ ಕೃತಿಯಿದು. ಅವರ ಚಿಂತನೆ, ದಾರ್ಶನಿಕತೆಗೆ ತಲೆಬಾಗಬೇಕು. ಅವರ ಚಿಂತನಾಲಹರಿಯಲ್ಲೇ ಅನುವಾದ ಅತ್ಯುತ್ತಮವಾಗಿ ಮೂಡಿಬಂದಿದೆ. ಹಿಂದುತ್ವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದನ್ನು ಅನುಭಾವಿಸಿ, ಜೀವನ ಶೈಲಿಯನ್ನಾಗಿ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಜಿ.ಬಿ.ಹರೀಶ್, ವರಕವಿ ಬೇಂದ್ರೆಯವರಂತೆ ಸಾವರ್ಕರ್ ಅವರೂ ಶ್ರೇಷ್ಠ ಕವಿ. ತಮ್ಮ ಸಾಹಿತ್ಯದ ಮೂಲಕ ಭಾರತ ಮಾತೆಗೆ ಕಾವ್ಯಾಭಿಷೇಕ ಮಾಡಿದ ಸ್ವಾತಂತ್ರ್ಯ ವೀರ. ಸೆರೆವಾಸದಲ್ಲಿದ್ದುಕೊಂಡೇ ಇಂತಹ ಅದ್ಭುತ ಕೃತಿ ರಚಿಸಿದ್ದಾರೆ. ಸಿಖVರು ಹಿಂದುಗಳಲ್ಲ ಎಂಬ ಸಂದರ್ಭದಲ್ಲಿ ಸಿಖVರು ಹಿಂದುಗಳೇ ಎಂದು ಪ್ರತಿಪಾದಿಸಿದರು. ಸಿಖVರು ಹಿಂದುಗಳಾದರೆ ಲಿಂಗಾಯಿತರು ಹಿಂದುಗಳಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಕೃತಿ ಕುರಿತು ರೋಹಿತ ಚಕ್ರತೀರ್ಥ ಮಾತನಾಡಿದರು. ಸಮೃದ್ಧ ಸಾಹಿತ್ಯದ ಕೆ.ಆರ್.ಹರ್ಷ ಉಪಸ್ಥಿತರಿದ್ದರು.