Advertisement

ಹಿಂದೂಯಿಸಂ ಮತ್ತು ಹಿಂದುತ್ವ: ನಟಿ ರಮ್ಯಾ ವ್ಯಾಖ್ಯಾನಿಸಿದ್ದು ಹೀಗೆ

03:43 PM Nov 14, 2021 | Team Udayavani |

ಬೆಂಗಳೂರು : ನಟಿ, ಮಾಜಿ ಸಂಸದೆ ರಮ್ಯಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಹಿಂದುತ್ವ ಮತ್ತು ಹಿಂದೂಯಿಸಂ ಬಗ್ಗೆ ಅವರು ನೀಡಿರುವ ವ್ಯಾಖ್ಯೆ ಸಾಮಾಜಿಕ ತಾಣದಲ್ಲಿ ಪರ, ವಿರೋಧದ ಚರ್ಚೆಗೆ ಕಾರಣವಾಗಿದೆ.

Advertisement

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರಮ್ಯಾ, ”ಹಿಂದುತ್ವ ಮತ್ತು ಹಿಂದೂಯಿಸಂ ಒಂದೇ ವಿಚಾರವಲ್ಲ. ಹಿಂದೂಯಿಸಂ ರಾಜಕೀಯವಾಗಿಲ್ಲ, ಆದರೆ ಹಿಂದುತ್ವದಲ್ಲಿ ರಾಜಕೀಯವಿದೆ. ಹಿಂದೂಯಿಸಂ ಎಲ್ಲರನ್ನೊಳಗೊಂದು, ಎಲ್ಲರನ್ನು ಪ್ರೀತಿಸುವುದಾಗಿದೆ. ಹಿಂದುತ್ವ ಅದಕ್ಕೆ ವಿರುದ್ಧವಾಗಿದೆ. ನಿಜವಾದ ಹಿಂದುಗಳಿಗೆ ಅದರ ವ್ಯತ್ಯಾಸ ತಿಳಿದಿದೆ” ಎಂದು ಇಂಗ್ಲೀಷ್ ನಲ್ಲಿ ಬರೆದಿದ್ದಾರೆ.

ರಮ್ಯಾ ಅವರ ಪೋಸ್ಟ್ ಗೆ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ಇನ್ನು ಕೆಲವರು ವಿರೋಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next