ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ (ಮಾರ್ಚ್ 13) ಬರೋಬ್ಬರಿ 1,000 ಅಂಕಗಳಷ್ಟು ಭಾರೀ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ನಡೆಸಿದೆ. ಇದರ ಪರಿಣಾಮ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾದಂತಾಗಿದೆ.
ಇದನ್ನೂ ಓದಿ:Critics’ Choice Awards: ಮಿಂಚಿದ ʼ12th ಫೇಲ್ʼ.. ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕಗಳಷ್ಟು ಇಳಿಕೆ ಕಂಡಿದ್ದು, 72,667.89 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 363 ಅಂಕಗಳಷ್ಟು ಇಳಿಕೆಯಾಗಿದ್ದು, 21,972.80 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು.
ಸೆನ್ಸೆಕ್ಸ್ ಕುಸಿತದ ಪರಿಣಾಮ ಅದಾನಿ ಗ್ರೀನ್ ಎನರ್ಜಿ, ಎನ್ ಎಚ್ ಪಿಸಿ, ಅದಾನಿ ಎನರ್ಜಿ, ಬಿಎಚ್ ಇಎಲ್, ಪವರ್ ಗ್ರಿಡ್, ಎನ್ ಟಿಪಿಸಿ ಷೇರುಗಳ ಬೆಲೆ ಇಳಿಕೆಯಾಗಿದೆ.
ಭಾರೀ ಪ್ರಮಾಣದಲ್ಲಿ ಷೇರು ಖರೀದಿಯ ಒತ್ತಡದ ಹಿನ್ನೆಲೆಯಲ್ಲಿ ಬಹುತೇಕ ಷೇರುಗಳ ಬೆಲೆಯಲ್ಲಿ ಕುಸಿತ ಕಂಡಿತ್ತು.
ಬಿಎಸ್ ಇ, ಎನ್ ಎಸ್ ಎಸ್ ಇ ಷೇರುಪೇಟೆ ಬೆಲೆಯಲ್ಲಿ ಭಾರೀ ಕುಸಿತ ಕಂಡ ಪರ ಪರಿಣಾಮ ಬಿಎಸ್ ಇ ಪಟ್ಟಿಯಲ್ಲಿನ ಷೇರುಗಳ ಮೌಲ್ಯದಲ್ಲಿ 12,ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ತಿಳಿಸಿದ್ದು, ಪ್ರಸ್ತುತ ಷೇರುಪೇಟೆ ಮಾರುಕಟ್ಟೆ ಮೌಲ್ಯ 374 ಲಕ್ಷ ಕೋಟಿ ರೂಪಾಯಿ.