Advertisement

ಹಿಂದೂಗಳಲ್ಲಿ ದೊಂಬಿತನದ ಪ್ರವೃತ್ತಿ ಇಲ್ಲ

03:28 PM Oct 24, 2021 | Team Udayavani |

ಬಾಗಲಕೋಟೆ: ಸಮುದಾಯದಲ್ಲಿರುವ ಎಲ್ಲ ಸಮಾಜ ಬಾಂಧವರು ನೆಮ್ಮದಿಯಿಂದ ಬದುಕಲು ಸರ್ಕಾರ ವ್ಯವಸ್ಥೆ ಮಾಡಬೇಕು. ಯಾವುದೇ ದೇಶದಲ್ಲಿ ಮತೀಯರ ಬಗ್ಗೆ ಒಂದು ಮಾತು ಅಡ್ಡ ಬಂದರೆ ಸಾಕು ಪ್ರಪಂಚದಲ್ಲಿ ದೊಂಬಿಯಾಗುತ್ತವೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಲ್ಲಿ ಅಂತಹ ದೊಂಬಿತನದ ಪ್ರವೃತ್ತಿ ಇಲ್ಲ. ಹಾಗಂತ ಸುಮ್ಮನಿರುತ್ತಾರೆ ಅಂಥ ಹಿಂಸೆ ಮಾಡ್ತಿರೋದು ಯಾರಿಗೂ ಶೋಭೆ ತರೋದಲ್ಲ. ಪ್ರಜೆಗಳು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಹಾಗೊಂದು ವೇಳೆ ಆದರೆ ಸರ್ಕಾರ ಪರಿಸ್ಥಿತಿ ನಿಭಾಯಿಸಬೇಕು. ಸರ್ವ ಮತೀಯರು ನೆಮ್ಮದಿಯಿಂದ ಬದುಕಲು ವ್ಯವಸ್ಥೆ ಮಾಡಬೇಕು. ಹೀಗಾಗದಿದ್ದರೆ ಜನರ ಭಾವನೆಗಳ ಕಟ್ಟೆ ಒಡೆದಾಗ ದೊಂಬಿಗಳು ಏಳುತ್ತವೆ. ಧರೆ ಹೊತ್ತಿ ಉರಿದೆಡೆ ಅದನ್ನು ಯಾರಿಂದಲೂ ಶಮನ ಮಾಡಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಎದುರಾಗದಂತೆ ಎಲ್ಲ ದೇಶದ ಸರ್ಕಾರಗಳು ಮುಂದೆ ನಿಂತು ನಿಭಾಯಿಸಬೇಕು ಎಂದರು.

ಮಾಧ್ಯಮಗಳು ತಮ್ಮ ಹೇಳಿಕೆಯನ್ನು ಯಥಾವತ್ತಾಗಿ ಜನರ ಮುಂದಿಡಬೇಕು. ಹಿಂದೂಗಳ ದೇಗುಲ ನಿರ್ವಹಣೆಯನ್ನು ಹಿಂದೂಗಳಿಗೆ ಬಿಡಿ ಎಂದು ಹೇಳಿದ್ದರೆ ಅದನ್ನು ಬ್ರಾಹ್ಮಣರ ದೇವಸ್ಥಾನವನ್ನು ಬ್ರಾಹ್ಮಣರಿಗೆ ಬಿಡಿ ಅಂತ ಬರೆಯಲಾಗಿದೆ. ಇದು ಆಗಬಾರದು. ಸಮಾಜ ಕೆಣುಕವಂತೆ ನಾವು ಮಾತನಾಡಿಲ್ಲ. ಆ ಶಬ್ದವನ್ನೇ ನಾನು ಬಳಸಿಲ್ಲ. ಹೀಗಾಗಿ ಯಥಾವತ್ತಾಗಿ ವರದಿ ಮಾಡಿ ಎಂದು ಹೇಳಿದರು.

ದೇಶದಲ್ಲಿ ಬೆಲೆ ಏರಿಕೆ ಯಾವ ಕಾರಣಕ್ಕೆ ಆಗಿದೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಪ್ರಾಯಶಃ ಕೋವಿಡ್‌ ಪ್ರಭಾವದಿಂದ ಇಲ್ಲಿ ಮಾತ್ರವಲ್ಲ, ಪ್ರಪಂಚದೆಲ್ಲೆಡೆ ಈ ವ್ಯವಸ್ಥೆ ಉಂಟಾಗಿದೆ. ಇದಕ್ಕೆ ಯಾರೋ ಒಬ್ಬರನ್ನ ಹೊಣೆ ಮಾಡೋದು ಎಷ್ಟು ಸೂಕ್ತ ಅನ್ನೋದನ್ನ ನೋಡಿ ಹೆಜ್ಜೆ ಇಡುವುದು ಸೂಕ್ತ ಎಂದರು.

ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯವನ್ನು ಯುದ್ಧ ಅನ್ನೋ ರೀತಿ ಬಿಂಬಿಸಲಾಗುತ್ತಿದೆ. ಕ್ರೀಡೆಯನ್ನು ಕ್ರೀಡೆಯಾಗಿ ನೋಡುವುದು ವಾಸ್ತವ. ದೊಂಬಿ, ಗಲಾಟೆ, ಗದ್ದಲ ಆದರೆ ಅದನ್ನು ಶಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಾವು ನೋವಾದರೆ ಯಾರಿಗೆ ಉಪದೇಶ ಕೊಡಬೇಕು. ಕ್ರೀಡಾಪಟುಗಳೇ ಎಷ್ಟರ ಮಟ್ಟಿಗೆ ಕ್ರೀಡೆಯನ್ನು ಕ್ರೀಡೆಯಾಗಿ ನೋಡುತ್ತಿದ್ದಾರೆ. ಕೆಲ ಕ್ರೀಡಾಪಟುಗಳೇ ಹೊಡೆದಾಡಿಕೊಂಡು, ಅಸಭ್ಯ ವರ್ತನೆ ನಡೆದ ಉದಾಹರಣೆಗಳಿವೆ. ಆ ಪ್ರಜೆಗಳ ಹೇಳಿಕೆ ನೋಡಿದರೆ ಪಾಕಿಸ್ತಾನ ಈ ಪಂದ್ಯವನ್ನು ಯುದ್ಧ ಎಂದು ಭಾವಿಸಿದಂತಿದೆ ಎಂದರು.

Advertisement

ನಮ್ಮಲ್ಲೂ ಯುವಕರ ಗುಂಪುಗಳಿವೆ. ಸೋಲು-ಗೆಲುವು ಆದರೆ ಪರಸ್ಪರ ಹೊಡೆದಾಟ ನಿಂದನೆ ಆಗುತ್ತವೆ. ಕ್ರೀಡಾಪಟುಗಳಲ್ಲಿ, ಪ್ರಜೆಗಳಲ್ಲಿ ಕ್ರೀಡೆಯನ್ನು ಕ್ರೀಡೆಯಾಗಿ ನೋಡುವ ಪ್ರವೃತ್ತಿ ಇದೆಯೇ ಎಂದು ನೋಡಬೇಕು. ಇದು ವಿಕೋಪಕ್ಕೆ ಹೋಗುವುದಾದರೆ ಇದರ ಅಗತ್ಯತೆ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next