ಬೆಂಗಳೂರು: ಕೋಮುವಾದ ಅನ್ನುವುದು ಯಾವ ಹಿಂದೂವಾದಿಗಳಲ್ಲೂ ಇಲ್ಲ. ಹಿಂದೂ ವಾದಿಗಳು ಕೋಮುವಾದಿಗಳು ಆಗಲು ಸಾಧ್ಯವೇ ಇಲ್ಲ. ಆದರೆ ಕಳೆದ 75 ವರ್ಷಗಳಿಂದ ನಮ್ಮ ಮೇಲೆ ಕಾಂಗ್ರೆಸಿಗರು ಕೋಮುವಾದಿಗಳು ಎಂಬ ಆರೋಪ ಮಾಡುತ್ತಲೇ ಇದ್ದಾರೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.
ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಸ್ಟ್ ರವಿವಾರ ನಿಮಾನ್ಸ್ ಕನ್ವೆನÒನ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಅರವಿಂದ ಘೋಷರ 150ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮೇಲಿನ ಕೋಮುವಾದ ಆರೋಪ ಶುರುವಾಗಿದ್ದು ಇವತ್ತಿ ನಿಂದ ಅಲ್ಲವೇ ಅಲ್ಲ. ಯಾವತ್ತೋ ಶುರುವಾಗಿತ್ತು ಎಂಬುವುದನ್ನು ಅರವಿಂದರು ಹೇಳಿದ್ದಾರೆ. ನಾವು ತಿಳಿಯಬೇಕಾಗಿರುವ ಎಷ್ಟೋ ಸಂಗತಿಗಳನ್ನು ಅರವಿಂದರು ತಮ್ಮದೇ ಆದ ಶೈಲಿಯಲ್ಲಿ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.
ಅರವಿಂದ ಘೋಷರು ರಾಷ್ಟ್ರ ವಾದಿಯಾಗಿದ್ದರು. ರಾಷ್ಟ್ರವಾದಿತ್ವದ ಪರಿಕಲ್ಪನೆಯಲ್ಲಿ ದೇಶ ನಿರ್ಮಾಣದ ಬಗ್ಗೆ ಕನಸು ಕಂಡಿದ್ದರು. ರಾಷ್ಟ್ರ ವಾದಿತ್ವದ ನೆಲೆ ಜ್ಯೋತಿಯನ್ನು ಅರವಿಂದರು ಈ ನೆಲದಲ್ಲಿ ಬೆಳಗಿ ದ್ದಾರೆ ಎಂದು ಸ್ಮರಿಸಿದರು.
ಸ್ವಾತಂತ್ರ್ಯದ ನಂತರ ಅರವಿಂದ ಘೋಷ್ ಅವರ ವಿಚಾರಧಾರೆಗಳನ್ನು ನಾವು ಮರೆತಿದ್ದೇವೆ. ಆ ಹಿನ್ನೆಲೆ ಯಲ್ಲಿ ಯುವ ಸಮೂಹಕ್ಕೆ ಅರವಿಂದ ಘೋಷ್ ಅವರ ಸಾಹಿತ್ಯ, ಚಿಂತನೆ ಸೇರಿದಂತೆ ಇನ್ನಿತರ ವಿಚಾರಧಾರೆಗಳನ್ನು ತಲುಪಿಸುವ ಕೆಲಸ ಆಗಬೇಕಾಗಿದೆ. ತಮ್ಮ ಮನೆಯವರನೆಲ್ಲ ಬಿಟ್ಟು ಅರವಿಂದರು ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಹೀಗಾಗಿ ಅವರು ತ್ಯಾಗದ ಮೂರ್ತಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಸಹಿತ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.