Advertisement

ಹಿಂದೂ ದಮನನೀತಿ ಖಂಡನೀಯ: ಗುರುಪುರ ಶ್ರೀ

09:36 AM Oct 12, 2017 | Team Udayavani |

ಕೈಕಂಬ: ರಾಜ್ಯದಲ್ಲಿ ಗೋಹತ್ಯೆ ನಿರಾತಂಕವಾಗಿ ನಡೆಯುತ್ತಿದ್ದು, ಯಾವುದೇ ಕಾನೂನುಗಳು ಪಾಲನೆ ಆಗು
ತ್ತಿಲ್ಲ. ಅದಕ್ಕೋಸ್ಕರ ಓರ್ವ ಒಂಬುಡ್ಸ್‌ ಮನ್‌ ಹಾಗೂ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿ ಗೋಹತ್ಯೆ
ಸಂಬಂಧಿಸಿದ ಕಾನೂನಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಿ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತಾದರೂ ಅದು ಜಾರಿಗೆ ಬಂದಿಲ್ಲ ಎಂದು ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

Advertisement

ಬುಧವಾರ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಗುರುಪುರ ಪ್ರಖಂಡದ ವತಿಯಿಂದ ಗುರುಪುರ – ಕೈಕಂಬದಲ್ಲಿ ಜರಗಿದ ಪ್ರತಿಭಟನ ಪ್ರದರ್ಶನ ಸಭೆಯಲ್ಲಿ ಅವರು ಮಾತನಾಡಿದರು.

ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದನ್ನು ಜಾರಿಗೊಳಿಸಲು ಸಂಪ್ಯ ಠಾಣೆಯ ಪೊಲೀಸರಿಗೆ ಆಗಲಿಲ್ಲ. ಅದನ್ನು ಪ್ರಶ್ನಿಸಿದ ನ್ಯಾಯವಾದಿಯ ವಿರುದ್ಧವೇ ಕಾನೂನು ಕ್ರಮಕ್ಕೆ ಮುಂದಾಗಿರುವ ಸಂಪ್ಯ ಠಾಣೆಯ ಪೊಲೀಸ್‌ ಅಧಿಕಾರಿಯನ್ನು ಸರಕಾರ ಕೂಡಲೇ ಅಮಾನತು ಮಾಡಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಹಿಂದೂ ಮುಖಂಡ ಜಗದೀಶ್‌ ಕಾರಂತರ ಮೇಲೆ ಕೇಸು ದಾಖಲಿಸುವಂತೆ ಗೃಹ ಸಚಿವರಿಗೆ ಸೂಚಿಸಿದ್ದು ಸರಿಯೇ ಎಂದು ಪ್ರಶ್ನಿಸಿದರು.

ರಾಜ್ಯದ ಹಲವೆಡೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಿಂದೂಗಳ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. 

ಹಿಂದೂ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಬ್ಟಾಳಿಕೆ, ದೌರ್ಜನ್ಯ ನಡೆಸುವ ಮೂಲಕ ರಾಜ್ಯ ಸರಕಾರವು ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ  ಅದರ ವಿರುದ್ಧ ಹಿಂದೂ ಸಂಘಟನೆಗಳ ಖಂಡನೆ ಜರಗಿತು.

Advertisement

ಬಂಟ್ವಾಳ ಮಸೀದಿಯಲ್ಲಿ ಐಸಿಸ್‌ ಉಗ್ರರು ಬೀಡು ಬಿಟ್ಟಿದ್ದಾರೆ ಎಂದು ಹೇಳಿದ್ದಕ್ಕೆ ಸಂಬಂಧಿಸಿ ಯಾಕೆ ಸುಮೋಟೋ ಕೇಸು ದಾಖಲಿಸಿಲ್ಲ ಎಂದು ಅವರು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಐಸಿಸ್‌ ಬೀಡು ಬಿಟ್ಟಿದೆ ಎಂದು ಓರ್ವ ಮೌಲವಿಯೇ ಹೇಳಿದರೂ ನಿಮಗೆ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ. ಹಿಂದೂ ದಮನ ನೀತಿಯೇ ನಿಮ್ಮ ಕನಸು. ಇದರ ವಿರುದ್ಧ ಹೋರಾಡಲು ಹಿಂದೂ ಸಮಾಜ ಸಿದ್ಧವಾಗಿದೆ. ಸಿದ್ದರಾಮಯ್ಯನವರು ಮಾಡಲೇಬೇಕಾಗಿರುವ ಕೆಲಸಗಳನ್ನು ಬಿಟ್ಟು ಹಿಂದೂ ವಿರೋಧಿಯಾಗಿಯೇ ವರ್ತಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಶ್ರೀಗಳು ಆರೋಪಿಸಿದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಬಜರಂಗ ದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್‌, ವಿಶ್ವ ಹಿಂದೂ ಪರಿಷತ್‌ ಗುರುಪುರ ಪ್ರಖಂಡದ ಅಧ್ಯಕ್ಷ ವಿಷ್ಣು ಕಾಮತ್‌, ಮಂಗಳೂರು ಉತ್ತರ ವಿಧಾನಸಭಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ರೂಪೇಶ್‌ ಕುಮಾರ್‌ ಅದ್ಯಪಾಡಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ವಿನೋದ್‌ ಮಾಡ, ತಾಲೂಕು ಪಂಚಾಯತ್‌ ಸದಸ್ಯ ನಾಗೇಶ್‌ ಶೆಟ್ಟಿ, ಸುದರ್ಶನ್‌ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಸತ್ಸಂಗ ಸಹ ಪ್ರಮುಖ್‌ ಕೃಷ್ಣ ಕಜೆಪದವು ಸ್ವಾಗತಿಸಿದರು. ಗಣೇಶ್‌ ಪಾಕಾಜೆ ಕಾರ್ಯಕ್ರಮ ನಿರೂಪಿಸಿದರು. ಹಿಂದೂ ಜಾಗರಣ ವೇದಿಕೆ ಗುರುಪುರ ಪ್ರಖಂಡ ಸಂಚಾಲಕ ಹರೀಶ್‌ ಮಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next