Advertisement
ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಸಮಾರೋಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರುಚಾರುದತ್ತ ಪಿಂಗಳೆ, ಉತ್ತಮ ಕಾನೂನು ಪ್ರಸ್ತಾಪಗಳನ್ನು ಮಾಡಿ ನಾವು ಕೇಂದ್ರ ಸರಕಾರಕ್ಕೆ ನೀಡುತ್ತೇವೆ. ಜೊತೆಗೆ ನೇಪಾಳವನ್ನೂ ಮತ್ತೊಮ್ಮೆ ಹಿಂದೂ ರಾಷ್ಟ್ರವನ್ನಾಗಿಸಲು ಅಧಿವೇಶನದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಸರ್ವಾನುಮತದಿಂದ ಬೆಂಬಲಿಸಿವೆ. ಹಿಂದುತ್ವನಿಷ್ಠರ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಭಾರತದ 26 ರಾಜ್ಯಗಳ ಸಹಿತ ಅಮೆರಿಕಾ, ಹಾಂಗಕಾಂಗ್, ನೇಪಾಳ, ಫಿಜಿ ಮತ್ತು ಇಂಗ್ಲೆಂಡ್ ನ 177 ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ 400 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು, ಎಂದರು.
Related Articles
Advertisement
ಹಲಾಲ್ ಜಿಹಾದ್ ಪುಸ್ತಕ ಲೇಖಕ ಮತ್ತು ಅಭ್ಯಾಸಕರಾದ ರಮೆಶ್ ಶಿಂದೆ ಮಾತನಾಡಿ, ಮುಸ್ಲಿಮರಿಗೆ ಹಲಾಲ್ ಕಡ್ಡಾಯವಾಗಿದೆಯೇ ಹೊರತು ಇತರ ಧರ್ಮ ಪಂಥಗಳಿಗೆ ಅಲ್ಲ. ಆದರೂ ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳ ಮೇಲೆ ಹಲಾಲ್ ಪ್ರಮಾಣೀಕೃತ ಮಾಂಸ ಮತ್ತು ಉತ್ಪನ್ನಗಳನ್ನು ಹೇರುವುದು ಇದು ಭಾರತೀಯ ಸಂವಿಧಾನದಲ್ಲಿ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಗ್ರಾಹಕ ಹಕ್ಕುಗಳಿಗೆ ವಿರುದ್ಧವಾಗಿದೆ. ಆದ್ಧರಿಂದ ಶೇ 100 ರಷ್ಟು ಹಲಾಲ್ ಪ್ರಮಾಣೀಕರಿಸಿದ ಆಹಾರ ಮಾರಾಟ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳಾದ ಮ್ಯಾಕ್ ಡೊನಾಲ್ಡ್ , ಕೆ.ಎಫ್.ಸಿ ಇವುಗಳ ವಿರುದ್ಧ ಮೊಕದ್ಧಮೆ ಹೂಡಬೇಕು. ಹಲಾಲ್ ಅರ್ಥವ್ಯವಸ್ಥೆಯನ್ನು ವಿರೋಧಿಸಲು ಪ್ರತಿ ಜಿಲ್ಲೆಯ ಮಟ್ಟದಲ್ಲಿ ಹಲಾಲ್ ವಿರೋಧಿ ಕ್ರಿಯಾ ಸಮಿತಿಗಳನ್ನು ರಚಿಸಲಾಗುತ್ತಿದೆ. ಇದರಿಂದ ಹಲಾಲ್ ಅರ್ಥವ್ಯವಸ್ಥೆಯ ವಿರುದ್ಧ ಆಂದೋಲನ ನಡೆಸಲು ಯೋಜಿಸಲಾಗಿದೆ. ಅಲ್ಲದೆ ಸಮೀತಿ ಪ್ರಕಟಿಸಿರುವ ಹಲಾಲ್ ಜಿಹಾದ್ ಪುಸ್ತಕವನ್ನು ಹೆಚ್ಚು ಜನ ಓದಬೇಕು ಎಂದರು.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹಂಸ ಮಾತನಾಡಿ, ಯಾವ ಆಕ್ರಮಣಕಾರಿಯೊಂದಿಗೆ ನಾವು ಹೋರಾಡಿ ಭಾರತದಿಂದ ಹೊರಹಾಕಿದ್ದೆವೊ ಅವರ ಹೆಸರುಗಳನ್ನು ಭಾರತದ ನಗರಗಳಿಗೆ ಏಕೆ ಇಡಬೇಕು? ಇದಕ್ಕಾಗಿ ನಾವು ಕೇಂದ್ರ ಸರ್ಕಾರದ ಬಳಿ ಕೇಂದ್ರೀಯ ನಾಮಕರಣ ಆಯೋಗವನ್ನು ಸ್ಥಾಪಿಸುವುದರ ಮೂಲಕ ದೇಶಾದ್ಯಂತ ಇರುವ ಪಟ್ಟಣಗಳು,ವಾಸ್ತುಗಳು, ರಸ್ತೆಗಳು, ಸಂಗ್ರಹಾಲಯಗಳು, ಇತ್ಯಾದಿಗಳಲ್ಲಿ ವಿದೇಶಿ ಆಕ್ರಮಣಕಾರರ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದೇವೆ. ಅದರಂತೆ ಗೋವಾ ನಗರಕ್ಕೆ ಇಟ್ಟಿರುವ ವಾಸ್ಕೊ-ಡ-ಗಾಮಾ ಈ ವಿದೇಶಿ ಆಕ್ರಮಣಕಾರರ ಹೆಸರನ್ನು ಬದಲಾಯಿಸಿ ಗೋಮಂತಕೀಯರ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಸಂಭಾಜಿ ಮಹಾರಾಜರ “ಸಂಭಾಜಿನಗರ” ಎಂದು ಹೆಸರಿಡಬೇಕು ಎಂದು ಹೇಳಿದರು.