Advertisement

ಹಿಂದೂ, ಮುಸ್ಲಿಂ ಭಾವೈಕ್ಯತೆ ಉರೂಸ್‌

07:36 AM Feb 26, 2019 | |

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಹಿಂದೂ ಮುಸ್ಲಿಮರು ಒಂದೇ ಕುಟುಂಬದಂತೆ ಕೂಡಿ ತಾತಯ್ಯನವರ ಉತ್ಸವ ಆಚರಿಸುತ್ತಿದ್ದಾರೆ. ಸೋಮವಾರದಿಂದ ಆರಂಭವಾಗಿರುವ ಈ ಉರೂಸ್‌ನಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ತಾತಯ್ಯನವರ ಸೇವೆ ಮೂರು ದಿನಗಳು ನಡೆಸುತ್ತಾರೆ.

Advertisement

ಈ ಜಾತ್ರೆಗೆ ಅಕ್ಕ ಪಕ್ಕದ ಊರುಗಳಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಬೀದರ್‌, ಕಲುºರ್ಗಿ, ವಿಜಯಪುರಗಳಿಂದ ಸಾವಿರಾರು ಹಿಂದೂ ಮುಸ್ಲಿಂ ಭಾಗವಹಿಸುತ್ತಾರೆ. ಪಟ್ಟಣ ಸಿಂಗಾರವಾಗಿದ್ದು, ಹಿಂದೂ ಮುಖಂಡರೇ ತಾತಯ್ಯನ ಸಂಪೂರ್ಣ ಉತ್ಸವದ ಜವಾಬ್ದಾರಿ ನೋಡಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆ.

ಸೌಹಾರ್ದ ತಾಣ: ತಾತಯ್ಯ ಎಂದು ಪ್ರಸಿದ್ಧಿ ಹೊಂದಿರುವ ಮೊಯೂದ್ದೀನ್‌ ಖಾದ್ರಿಯವರು ದೈವಸಂಭೂತರು. ಈ ಭಾಗದಲ್ಲಿ ಸೂಫಿ ಪರಂಪರೆಯನ್ನು ಸಮರ್ಥವಾಗಿ ಬೇರೂರುವಂತೆ ಮಾಡಿದವರು. ಪವಾಡ ಪುರುಷ ತಾತಯ್ಯನಿಗೆ ಹರಕೆ ಹೊತ್ತು ಕಡ್ಲೆ ಸಕ್ಕರೆ ಪೂಜೆ ಮಾಡಿಸಿ ತಿದ್ದಿದರೆ (ಹಂಚಿದರೆ) ನಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.

ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ: ಸೋಮವಾರ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ತಾತಯ್ಯನವರ ಕುದುರೆ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿರುವ ಹೂವಿನ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಿದರು ಹಾಗೂ ಗೋರಿಯ ಮುಂದೆ ನಾಮಾಜ್‌ ಮಾಡಲಾಯಿತು.
ಎರಡನೇ ದಿನವಾದ ಮಂಗಳವಾರ ಪಟ್ಟಣದ ಹೈಸ್ಕೂಲ್‌ ಮೈದಾನದಲ್ಲಿ ಖವ್ವಾಲಿ ನಡೆಯಲಿದೆ.

ಮೂರನೇ ದಿನ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ವಿವಿಧ ರಾಜಕೀಯ ಮುಖಂಡರು ಆಯೋಜಿಸಿದೆ. ಈ ಉರೂಸ್‌ ಪ್ರಯುಕ್ತ ಸರ್ಕಸ್‌, ವಿನೋದ ಆಟಗಳು ಸಾಹಸ ಕ್ರೀಡೆಗಳು, ಮಕ್ಕಳ ಆಟ ಸಾಮಗ್ರಿ, ಗೃಹ ಉಪಯೋಗಿ ವಸ್ತುಗಳ ಮಳಿಗೆಗಳು ಹಾಗೂ ಕಾರ್‌ ರೇಸ್‌, ಮ್ಯಾಜಿಕ್‌ ವೀಲ್‌, ಕೊಲಂಬಸ್‌, ಕ್ರೀಡೆಗಳಿಗಾಗಿ ಮಂಡ್ಯ ಹಾಗೂ ತಿಪಟೂರು ಭಾಗಗಳಿಂದ ಬಂದಿರುವ ಕಂಪನಿಗಳು ದೊಡ್ಡ ಯಂತ್ರಗಳನ್ನು ಆಳವಡಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next