Advertisement

ಸೈನಿಕರಷ್ಟೇ ಗೌರವ ಪಡೆಯಲು ಶಿಕ್ಷಕರು ಅರ್ಹರು: ಬಾಲಸುಬ್ರಹ್ಮಣ್ಯಂ

06:55 AM Jul 05, 2018 | |

ಕಟಪಾಡಿ:  ಅಧ್ಯಾಪಕ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳ ಬದುಕಿಗೆ ಶಾಶ್ವತ  ಉತ್ತಮ ಮೌಲ್ಯ ರೂಪಿಸಿ ಸಮಾಜದ ಸತøಜೆಗಳನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ಕೊಡುವವರೇ ನಿಜವಾದ ಶಿಕ್ಷಕರು. ಈ ನಿಟ್ಟಿನಲ್ಲಿ  ಇಂದು ಸೇವಾ ನಿವೃತ್ತಿ ಹೊಂದುತ್ತಿರುವ ಮ್ಯಾಕ್ಸಿಂ ಡಿಸಿಲ್ವಾ  ಮಾದರಿ ಶಿಕ್ಷಕರಾಗಿದ್ದಾರೆ ಎಂದು ಸೈಂಟ್‌ ಮೇರೀಸ್‌  ಪ.ಪೂ. ಕಾಲೇಜು ಶಿರ್ವ ಇದರ ನಿವೃತ್ತ ಉಪನ್ಯಾಸಕ ಎಸ್‌. ಬಾಲಸುಬ್ರಹ್ಮಣ್ಯಂ  ಹೇಳಿದರು.

Advertisement

ಉದ್ಯಾವರ ಹಿಂದೂ ಹಿ.ಪ್ರಾ. ಶಾಲೆಯಲ್ಲಿ  38 ವರ್ಷ  ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಮ್ಯಾಕ್ಸಿಂ  ಡಿ’ಸಿಲ್ವಾ ಇವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಸಂಚಾಲಕ ಉದ್ಯಾವರ ನಾಗೇಶ್‌ ಕುಮಾರ್‌ ಮಾತನಾಡಿ  ಮ್ಯಾಕ್ಸಿಂ ಡಿ’ಸಿಲ್ವಾ  ವಿಷಯ ಶಿಕ್ಷಕ ಮಾತ್ರವಲ್ಲದೆ ದೆ„ಹಿಕ ಶಿಕ್ಷಕರಾಗಿಯೂ ಕೂಡ ಅವರು ದುಡಿದಿದ್ದಾರೆ ಎಂದರು.

ಶಾಲಾ ಹಳೆ ವಿದ್ಯಾರ್ಥಿನಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಮಾಧ್ಯಮದಲ್ಲಿ ಕಲಿತರೂ ಕೂಡ  ತನ್ನ ಆಂಗ್ಲ ಭಾಷಾ ಪ್ರೌಢಿಮೆಗೆ ಕಾರಣ ಅಧ್ಯಾಪಕ ಮ್ಯಾಕ್ಸಿಮ್‌ ಡಿಸಿಲ್ವಾ  ಅವರಾಗಿದ್ದಾರೆ ಎಂದರು.

ಶಾಲಾಡಳಿತ ಮಂಡಳಿಯ ಅಧ್ಯಕ್ಷ ಡಾ| ಯು.ಎನ್‌. ಮಯ್ಯ  ಅಧ್ಯಕ್ಷತೆ  ವಹಿಸಿದ್ದರು. ಹಿರಿಯ ಸಹ ಶಿಕ್ಷಕಿ ಹೇಮಲತಾ, ನಿವೃತ್ತ ಶಿಕ್ಷಕ ಕೃಷ್ಣಕುಮಾರ್‌ ರಾವ್‌, ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು ಮಾತನಾಡಿದರು.ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಮ್ಯಾಕ್ಸಿಂ  ಡಿ’ಸಿಲ್ವಾ ದಂಪತಿಯನ್ನು  ಸಮ್ಮಾನಿಸಲಾಯಿತು.

Advertisement

ವೇದಿಕೆಯಲ್ಲಿ  ಗ್ರಾ. ಪಂ. ಅಧ್ಯಕ್ಷೆ ಸುಗಂಧಿಶೇಖರ್‌, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಯು.ಆರ್‌. ಚಂದ್ರಶೇಖರ್‌, ನಿ.ಪೂ. ಅಧ್ಯಕ್ಷೆ  ಪೂರ್ಣಿಮಾ ದಿನೇಶ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್‌ ಕುಮಾರ್‌, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್‌ ಕುಮಾರ್‌, ವಿದ್ಯಾರ್ಥಿ ನಾಯಕ ಪೂರ್ಣೇಶ್‌ ಉಪಸ್ಥಿತರಿದ್ದರು. 

ಮುಖ್ಯೋಪಾಧ್ಯಾಯ  ಗಣಪತಿ ಕಾರಂತ್‌ ಸ್ವಾಗತಿಸಿದರು, ಸಹ ಶಿಕ್ಷಕಿಯರಾದ ಗೀತಾ ವಂದಿಸಿದರು. ರತ್ನಾವತಿ ಕಾರ್ಯಕ್ರಮ ನಿರೂಪಿಸಿದರು.

ಸೈನಿಕರು, ಶಿಕ್ಷಕರು ಶಕ್ತಿಕೇಂದ್ರಗಳು 
ಸೈನಿಕರು ಮತ್ತು ಶಿಕ್ಷಕರು ಒಂದು ದೇಶದ ಎರಡು ಶಕ್ತಿ ಕೇಂದ್ರಗಳು. ಸೆ„ನಿಕರು ದೇಶದ ಹೊರಗಿನ ಶತ್ರುಗಳನ್ನು ಹೊಡೆದೋಡಿಸಿ ದೇಶವನ್ನು ಸುಸ್ಥಿರ ಸ್ಥಿತಿಯಲ್ಲಿ ಇರಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಜ್ಞಾನವಂತರಾಗಿಸಿ ಅವರಲ್ಲಿದ್ದ  ಕೆಟ್ಟ ಗುಣಗಳನ್ನ ಹೊಡೆದೋಡಿಸಿ ಅವರ ವ್ಯಕ್ತಿತ್ವವನ್ನು ಸುಸ್ಥಿರ ಸ್ಥಿತಿಯಲ್ಲಿರಿಸುತ್ತಾರೆ. ಹಾಗಾಗಿ ಸೆ„ನಿಕರಷ್ಟೇ ಗೌರವ ಪಡೆಯಲು ಶಿಕ್ಷಕರು ಅರ್ಹರಾಗಿರುತ್ತಾರೆ. ಅದಕ್ಕೆ ಶಿಕ್ಷಕರ ಕಠಿನ ಪರಿಶ್ರಮ ಬೇಕಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ  ಎಸ್‌. ಬಾಲಸುಬ್ರಹ್ಮಣ್ಯಂ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next