Advertisement

ಕರ್ನಾಟಕದಿಂದ ದಿಲ್ಲಿಗೆ ಹೊಸ ವಾಯು ಮಾರ್ಗ

12:30 AM Mar 09, 2019 | |

ಲಕ್ನೋ: ಇಲ್ಲಿನ ಹಿಂಡೋನ್‌ ವಾಯು ನೆಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಣ್ಣ ಪ್ರಮಾಣದ ನಾಗರಿಕ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಶುಕ್ರವಾರ ಲೋಕಾರ್ಪಣೆ ಗೊಳಿಸಿದರು. ಇದರಿಂದಾಗಿ, ಕರ್ನಾಟ ಕದಿಂದ ದಿಲ್ಲಿಗೆ ತೆರಳುವ ಹೊಸ ವಾಯು ಮಾರ್ಗ ತೆರೆದು ಕೊಂಡಂತಾಗಿದೆ. ಇಲ್ಲಿಂದ ಕರ್ನಾಟಕದ ಕಲಬುರಗಿ, ಹುಬ್ಬಳ್ಳಿ ಸೇರಿದಂತೆ ಕಣ್ಣೂರು, ನಾಸಿಕ್‌, ಶಿಮ್ಲಾ, ಜಾಮ್‌ನಗರ್‌, ಫೈಜಾ ಬಾದ್‌ ಹಾಗೂ ಪಿತ್ತೋರ್‌ಗಢಕ್ಕೆ ಸಂಪರ್ಕ ಸಿಗಲಿದೆ. ಉಡಾನ್‌ ಯೋಜನೆಯಡಿ, ಭಾರತೀಯ ವಾಯುಪಡೆ ಹಾಗೂ ಉತ್ತರ ಪ್ರದೇಶ ಸರಕಾರಗಳು ಜಂಟಿಯಾಗಿ, ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿರುವ ಈ ವಿಮಾನ ನಿಲ್ದಾಣ 5,425 ಚದರ ಕಿ.ಮೀ. ವ್ಯಾಪ್ತಿಯಲ್ಲಿದ್ದು, ಪ್ರತಿ ಗಂಟೆಗೆ 300 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 

Advertisement

ಸದ್ಯಕ್ಕೆ ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ ಕಾಮಗಾರಿ ಜಾರಿಯಲ್ಲಿದೆ. ಹಿಂಡೋನ್‌ ವಾಯು ನೆಲೆಯಿಂದ ದಿಲ್ಲಿಗೆ 35 ಕಿ.ಮೀ. ದೂರವಿದೆ. ಹಾಗಾಗಿ, ಸದ್ಯಕ್ಕೆ ಇಲ್ಲಿ ನಿರ್ಮಿಸಲಾಗಿರುವ ನಾಗರಿಕ ವಿಮಾನ ನಿಲ್ದಾಣ ಕೇವಲ ತಾತ್ಕಾಲಿಕವಾಗಿದ್ದು, 2022ರ ವೇಳೆಗೆ ದಿಲ್ಲಿ ವಿಮಾನ ನಿಲ್ದಾಣದ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ನಂತರ ಈ ನಿಲ್ದಾಣಕ್ಕೆ ವಿರಾಮ ಸಿಗಲಿದೆ.

ನಿಲ್ದಾಣದ ಹೈಲೈಟ್ಸ್‌
40 ಕೋಟಿ ರೂ. – ವಿಮಾನ ನಿಲ್ದಾಣದ ಅಂದಾಜು ವೆಚ್ಚ
5,425 ಚದರ ಕಿ.ಮೀ. – ವಿಮಾನ ನಿಲ್ದಾಣದ ವ್ಯಾಪ್ತಿ
300 ಗಂಟೆಗೆ ಮುನ್ನೂರು ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ

ಕಾಶ್ಮೀರಿಗರ ಮೇಲೆ ಹಲ್ಲೆಗೆ ಪ್ರಧಾನಿ  ಖಂಡನೆ
ಕಾಶ್ಮೀರಿಗರ ಮೇಲೆ ನಡೆಯುತ್ತಿರುವ ಹಲ್ಲೆ ಘಟನೆಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಲಕ್ನೋದಲ್ಲಿ ಹಣ್ಣಿನ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದವರನ್ನು “ದಾರಿ ತಪ್ಪಿದ ಜನ’ ಎಂದು ಉಲ್ಲೇಖೀಸಿದ್ದಾರೆ. ಉತ್ತರಪ್ರದೇಶದಲ್ಲಿ ಶುಕ್ರವಾರ ಹಲವು ಕಾಮಗಾರಿಗಳಿಗೆ ಚಾಲನೆ, ಶಿಲಾನ್ಯಾಸದಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಕಾಶ್ಮೀರಿಗರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ರಾಜ್ಯ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಮೆಟ್ರೋ ಲೈನ್‌ಗೆ ಚಾಲನೆ: ಬಳಿಕ ದಿಲ್ಲಿ ಮೆಟ್ರೋದ ರೆಡ್‌ ಲೈನ್‌ನ 9.63 ಕಿ.ಮೀ. ಉದ್ದದ ದಿಲಾÒದ್‌ ಗಾರ್ಡನ್‌-ನ್ಯೂ ಬಸ್‌ ಅಡ್ಡಾ ಸೆಕ್ಷನ್‌ ಅನ್ನು ಉದ್ಘಾಟಿಸಿದ್ದಾರೆ. ಈ ವಿಭಾಗದಲ್ಲಿ ಬರುವ ಎರಡು ಸ್ಟೇಷನ್‌ಗಳಿಗೆ ಹುತಾತ್ಮರ ಹೆಸರುಗಳನ್ನು ಇಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next