Advertisement

ಹಿಂದಿ ಭಾಷೆ ಹೇರಿಕೆ: ಕರವೇ ಪ್ರತಿಭಟನೆ

12:10 PM Apr 29, 2017 | Team Udayavani |

ಮೈಸೂರು: ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆ ಕಲಿಯುವಂತೆ ಒತ್ತಡ ಹೇರುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ದ ಕಾರ್ಯಕರ್ತರು ಶುಕ್ರವಾರ ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದರು.

Advertisement

ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಲು ಮುಂದಾಗಿರುವುದು ಖಂಡನೀಯ. ಕೇಂದ್ರ ಸರ್ಕಾರದ ಈ ನಡೆಯಿಂದ ಅನೇಕ ರಾಜ್ಯಗಳ ಮೇಲೆ ಅನನುಕೂಲದ ವಾತಾವರಣ ನಿರ್ಮಾಣವಾಗಲಿದೆ.

ಅಲ್ಲದೆ ದೇಶದಲ್ಲಿ ಹಿಂದಿ ಭಾಷೆ ಗೊತ್ತಿರುವವರನ್ನು ಮಾತ್ರ ಶ್ರೇಷ್ಠರೆಂದು ಬಿಂಬಿಸುವ ಜತೆಗೆ ಹಿಂದಿಯೇತರ ಭಾಷೆಗಳನ್ನು ಮೂಲೆಗುಂಪು ಮಾಡುತ್ತಿರುವುದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಕೇಂದ್ರ ಸರ್ಕಾರ ತನ್ನ ಈ ನಿರ್ಧಾರ ಕೈ ಬಿಡಬೇಕಿದ್ದು, ರಾಷ್ಟ್ರಪತಿಗಳು ಸಹ ಇದಕ್ಕೆ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್‌, ಪದಾಧಿಕಾರಿ ಗಳಾದ ಲೋಕೇಶ್‌, ಸುನಂದ, ಜಯಪ್ರಕಾಶ್‌, ರಫೀಕ್‌, ಜಾಫ‌ರ್‌, ಆನಂದ್‌, ಮಧು, ಆಶೋಕ್‌, ಮಹೇಶ್‌ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next