Advertisement
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಹುಲ್ ಗಾಂಧಿ ಯವರು ಹಲವು ದಿನಗಳಿಂದ ಪ್ರಚಾರದಿಂದ ದೂರ ಉಳಿದಿದ್ದರು. ಅವರಿಗೇ ಗ್ಯಾರಂಟಿ ಇಲ್ಲ ಎಂದ ಮೇಲೆ ಇನ್ನು ಕಾಂಗ್ರೆಸಿಗರು ಜನರಿಗೆ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಗ್ಯಾರಂಟಿ ಇಲ್ಲದ ಕಾರಣಕ್ಕೆ ರಾಹುಲ್ ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಲೋಕಭಾ ಚುನಾವಣೆಗೆ ನಿಂತಿದ್ದರು. ಅಮೇಠಿಯ ಜನತೆ ರಾಹುಲ್ ಗಾಂಧಿಯ ಗ್ಯಾರಂಟಿಯನ್ನು ನಂಬಲಿಲ್ಲ.
Related Articles
Advertisement
ಹಿಂದೂ ಸಂಸ್ಕೃತಿ, ಪರಂಪರೆಯನ್ನು ಕಾಂಗ್ರೆಸ್ ದ್ವೇಷಿಸು ತ್ತದೆ. ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ದಾಗ ಕಾಂಗ್ರೆಸ್ ಸ್ವಾಗತಿಸಲಿಲ್ಲ. ಈಗ ಪಿಎಫ್ಐ ಜತೆ ಒಂದೇ ತಕ್ಕಡಿಯಲ್ಲಿ ಬಜರಂಗ ದಳವನ್ನು ಇರಿಸುವ ಮೂಲಕ ಸೇಡಿನ ರಾಜ ಕಾರಣಕ್ಕೆ ಮುಂದಾಗಿದ್ದಾರೆ ಎಂದರು.
ಬಜರಂಗದಳ ಬಲಪಂಥೀಯ ಸಂಘಟನೆ ಆಗಿರಬಹುದು, ನೈತಿಕ ಪೊಲೀಸ್‌ಗಿರಿ ಮಾಡಿರಬಹುದು, ಆದರೆ ದೇಶದ್ರೋಹಿಯಲ್ಲ, ಪಿಎಫ್ಐ ಜತೆ ಕಾಂಗ್ರೆಸ್ ಟಿ-20 ಆಟ ಆಡುತ್ತಿದೆ ಎಂದು ಅವರು ಟೀಕಿಸಿದರು.
ಒಂದು ಸಾವಿರ ಕೋಟಿ ರೂ.ನಿಂದ 15 ಸಾವಿರ ಕೋಟಿ ರೂ.ಗೆ ಆದಾಯ ಹೆಚ್ಚಿಸಿಕೊಂಡ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ನಲ್ಲಿ ಶೇ. 85 ಕಮಿಷನ್ ಇದ್ದು, ಎಷ್ಟು ಮಂದಿ ಇದಕ್ಕಾಗಿ ಕೋರ್ಟ್‌ಗೆ ಹಾಜರಾಗುತ್ತಿದ್ದಾರೆ ಎಂಬುದನ್ನು ಕಾಂಗ್ರೆಸಿಗರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಅವರು ಹೇಳಿದರು. ರಾಜ್ಯ ಬಿಜೆಪಿ ವಕ್ತಾರ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ವಕ್ತಾರರಾದ ಜಗದೀಶ್ ಶೇವಣ ಮತ್ತಿತರರು ಉಪಸ್ಥಿತರಿದ್ದರು.